ಧರಣಿ
ಧರಣಿ ತಾಯೆ
ಕರವ ಮುಗಿವೆ
ಸುರಿಸು ಮುತ್ತು ಬೆಳೆಗಳ|
ಸರಿಸು ಕಷ್ಟ
ಮರೆಸು ನೋವ
ಮೊರೆಯ ಕೇಳು ನಮಿಪೆನು|
ಬೆವರು ಸುರಿಸಿ
ಬವಣೆ ಪಟ್ಟು
ಸವೆಸಿ ಜನ್ಮ ಬದುಕಲಿ|
ಕವಿದ ಮನದಿ
ಕುವರನಾನು
ದಿವಸ ದುಡಿಮೆ ಮಾಡುತ|
ಬೆಳೆಯ ಬೆಳೆದು
ಕಳೆಯ ತೆಗೆವೆ
ತಿಳಿದು ಭಾಗ್ಯ ನೀಡುತ|
ಒಲುಮೆಯಿಂದ
ಸಲಹು ನನ್ನ
ತುಳಿಯದಂತೆ ಮಾತೆಯೆ|
ರೈತನಾನು
ಜೀತ ಮಾಡಿ
ನೀತಿಯಿಂದ ಬಾಳುವೆ|
ಭೀತಿಯಿಲ್ಲ
ಧಾತೆ ನೀನು
ಪ್ರೀತಿಯಿಂದ ಕಾಣಲು||
-ಧರಣೀಪ್ರಿಯೆ, ದಾವಣಗೆರೆ
—–