ಅ.೧೭ರಿಂದ ಕೊಪ್ಪಳ ವಾರ್ತಾ ಇಲಾಖೆಯಿಂದ ಜನಜಾಗೃತಿ ಕಾರ್ಯಕ್ರಮ


ಕೊಪ್ಪಳ ಅ. 16: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಇವರಿಂದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಅ. 17 ರಿಂದ ಅ. 29ರವರೆಗೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹತ್ತು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಅ. 17ರಂದು ಕನಕಪುರ ಮತ್ತು ಹಾಲವರ್ತಿ, ಅ. 18ರಂದು ಲೇಬಗೇರಿ ಮತ್ತು ಕಲಕೇರಿ, ಅ. 19ರಂದು ಗಬ್ಬೂರ ಮತ್ತು ಬೇವಿನಹಳ್ಳಿ, ಅ.20ರಂದು ಕಂಪಸಾಗರ ಮತ್ತು ಮುನಿರಾಬಾದ್, ಅ. 21ರಂದು ಮಾದಿನೂರು ಮತ್ತು ಕೋಳೂರ, ಅ. 25ರಂದು ಅಳವಂಡಿ ಮತ್ತು ಕವಲೂರ, ಅ. 26ರಂದು ಬೂದಿಹಾಳ ಮತ್ತು ಹಲಗೇರಿ, ಅ. 27ರಂದು ಹಟ್ಟಿ ಮತ್ತು ಬಿಸರಳ್ಳಿ, ಅ. 28ರಂದು ಇರಕಲಗಡ ಮತ್ತು ಒನಬಳ್ಳಾರಿ ಹಾಗೂ ಅ. 29ರಂದು ಹಾಸಗಲ್ ಮತ್ತು ಚಿಕ್ಕಬೊಮ್ಮನಾಳ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಕುಷ್ಟಗಿ ತಾಲೂಕಿನ ಜನಜಾಗೃತಿ ಕಲಾ ರಂಘ ಸಂಸ್ಥೆಯ ನುರಿತ ಕಲಾವಿದರಿಂದ ಈ ಕಾರ್ಯಕ್ರಮ ನಡೆಯಲಿದ್ದು ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನೀತರ ಅಧಿಕಾರಿಗಳು ಮತ್ತು ಆಯಾ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲು ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

18:26