ಅನುದಿನ ಕವನ-೧೦೩೧, ಕವಿ: ಪ್ರಕಾಶ ಕೋನಾಪುರ, ಶಿಕಾರಿಪುರ, ಕವನದ ಶೀರ್ಷಿಕೆ: ಸೂರ್ಯನಿಗೆ ವಂದನೆ

ಸೂರ್ಯನಿಗೆ ವಂದನೆ

ಮುಖದ ಬೆಳಕು ಚಲ್ಲಿ
ಮಲಗಿದವರ ಎಬ್ಬಿಸುವ
ಓ ನನ್ನ ಸೂರ್ಯನೇ
ನಿನಗೆ ಮುಂಜಾನೆ ವಂದನೆ

ಕತ್ತಲೆ ತುಂಬಿದ ಧರೆಗೆ
ಮೆಲ್ಲಮೆಲ್ಲಗೆ ಮುಖ ತೋರಿಸಿ
ಬೆಳಕನೀಯುವ ಜಾದೂಗಾರನೇ
ಓ ನನ್ನ ಸೂರ್ಯನೇ
ನಿನಗೆ ಮುಂಜಾನೆ ವಂದನೆ

ಕೆಂಡದಂತೆ ನಿಗಿ ನಿಗಿ ಉರಿದು
ಬೆವರ ಬಸಿದು ನೆಲಕೆ ಹಣಿಸಿ
ನೆತ್ತಿ ಸುಡುವ ಮಾಯಕಾರನೇ
ಓ ನನ್ನ ಸೂರ್ಯನೇ
ನಿನಗೆ ಮಧ್ಯಾಹ್ನದ ವಂದನೆ

ನಿನ್ನೆಡೆಗೆ ಮುಖಮಾಡಿ ಅರಳಿ
ನಿಂತ ಸೂರ್ಯಪುಸ್ಪ ಮುದ್ದಾಡಿ
ಭೂತಾಯಿ ಮಡಿಲಲ್ಲಿ ಮಲಗುವ
ಓ ನನ್ನ ಸೂರ್ಯನೇ
ನಿನಗೆ ಮುಂಜಾನೆ ವಂದನೆ

ಕೆಂಪು ನೀಲಿ ಬಾವುಟದ ಮಧ್ಯೆ
ಮೂಡಿಬಂದ ಧರೆಯ ದೊರೆಯೇ
ಓ ನನ್ನ ಸೂರ್ಯನೇ
ನಿನಗೆ ಮುಸ್ಸಂಜೆಯ ವಂದನೆ

ಭೂಮಿ ತಾಯಿ ಒಡಲಲ್ಲಿ
ಮಲಗಿರುವ ಅಮರವೀರರ
ಗೋರಿಯ ಮೇಲೆ ಮೂಡಿ ಬರುವ
ಓ ನನ್ನ ಸೂರ್ಯನೇ
ನಿನಗೆ ಸಾಯಂಕಾಲದ ವಂದನೆ


-ಪ್ರಕಾಶ ಕೋನಾಪುರ
ಶಿಕಾರಿಪುರ
*****