ಅನುದಿನ ಕವನ-೧೦೩೩ ಕವಿ: ಟಿ.ಪಿ.‌ಉಮೇಶ್, ಚಿತ್ರದುರ್ಗ

ನೀ..
ಉಳಿದದ್ದು
ನನ್ನ ಪದ್ಯದಲ್ಲಿ!
ಕಳೆದದ್ದು
ಕಣ್ಣ ಮದ್ಯದಲ್ಲಿ!
***
ನೀನೆ…
ಉಳಿಸಿದ್ದು
ದೇವರ ಲೆಕ್ಕದಲ್ಲಿ!
ಕಳೆಸಿದ್ದು
ಆತ್ಮದ ಬುಕ್ಕದಲ್ಲಿ!
***
ನಿನಗಾಗಿ..
ಉಳಿಯುತ್ತಿರುವುದು;
ಪದಗಳ ಸಾಂಗತ್ಯದಲ್ಲಿ!
ಅಳಿಯುತ್ತಿರುವುದು;
ನಿನ್ನದೇ ಸ್ಮರಣೆಯಲ್ಲಿ!
***
ನಿನ್ನಿಂದ…
ಉಳಿಯಬಹುದು
ಅಳಿಯದೆ;
ಅಳಿಯಬಹುದು
ಉಳಿಯದೆ;
ನಿಗಿನಿಗಿ ಮೌನ ಹಾಡಿನಲ್ಲಿ!
***
ನಿನ್ನೊಳಗೆ..
ನೀ
ಉಳಕೊಂಡೆ;
ನಾ
ಕಳಕೊಂಡೆ!
***
ಕಡೆಗೆ…
ನೀ
ಗೋರಿ ಮೇಲಿನ ಚಿಗುರು!
ನಾ
ಚಿಗುರ ಮೇಲಣ ಹೂವು !
***
ಇಬ್ಬರೂ…
ಹೂವಿನ ಮುಗ್ಧ ಹಾಡು !


-ಟಿ.ಪಿ ಉಮೇಶ್, ಚಿತ್ರದುರ್ಗ
*****