ಸಾರ್ಥಕ ಸ್ಮಾರಕ
ಮರೆಯಾಗುವ ಈ “ಕಾಯ”ಕ್ಕೆ
ಸ್ಮಾರಕ ಯಾಕೆ?
ಸತ್ತ ಮೇಲೂ ಸ್ಮಾರಕ ಬೇಕೇ?
ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹಕೆ
ಜಾಹಿರಾತಿನ ನೇಹವೇಕೆ?
ಸಾಯುವ ಮೊದಲು
ಒಂದು ಕೆರೆ ಕಟ್ಟಿಸು
ತಲತಲಾಂತರದವರೆಗೂ
ಜೀವ ಜಾಲಗಳು ಬದುಕುತ್ತವೆ.
ಸಾಯುವ ಮೊದಲು
ಒಂದು ಆಸ್ಪತ್ರೆ ಕಟ್ಟಿಸು
ನಿಸ್ತೇಜಗಳು
ಉಸಿರಾಡುತ್ತವೆ
ಸಾಯುವ ಮೊದಲು
ಒಂದು ಉದ್ಯಾನ ನಿರ್ಮಿಸು
ಸಕಲ ಪಕ್ಷಿಗಳಿಗೆ
ತಾಣವಾದೀತು
ದಣಿದವರಿಗೆ ನೆರಳಾದೀತು.
ಸಾಯುವ ಮೊದಲು
ಒಂದು ಶಾಲೆ ಕಟ್ಟಿಸು
ಪ್ರಜ್ಞೆಯ ಚಿತ್ರವು
ಕಣ್ಣಿಗೆ ಕಂಡೀತು ಶಿಲ್ಪಿಗಳು ಮಾತಾಡುತ್ತವೆ.
ಇಲ್ಲಿ ಹಣವೇ ಮುಖ್ಯವಲ್ಲ,
ದಯೆಯೆ ಮುಖ್ಯ.
ಪ್ರಾಣಿ, ಪಕ್ಷಿ, ಜೀವದಂತು
ನಿಸರ್ಗವೇ ಮುಖ್ಯವು.
ಸಾಯುವ ಮೊದಲು
ದಾನ ಮಾಡು ಕಣ್ಣನು
ನೀ…ಸತ್ತಮೇಲೂ….
ಕುರಡನು ಜಗವ ನೋಡುವ,
ನಿನ್ನ ಕಣ್ಣು ಜೀವಂತವಿರುವುದು.
ಸಾಯುವ ಮೊದಲು
ದಾನ ಮಾಡು ಅಂಗಾಂಗವ
ಸತ್ತ ಮೇಲೂ…
ಅನ್ಯರಿಗೆ
ಜ್ಞಾನ ಸಿಗುವುದು.
ಮರೆಯಾಗುವ ಈ “ಕಾಯ “ಕ್ಕೆ
ಸ್ಮಾರಕ ಯಾಕೆ?
ನೀ….ಸತ್ತಮೇಲೂ… ಸ್ಮಾರಕ ಬೇಕೇ?
ನೀ ಸಾಯುವ ಮೊದಲೇ…..
ಏನಾದರೂ… ಮಾಡು..
ಬಂಧು ಬಳಗ
ಬೇಕು- ಬೇಡಾದವರು
ಬಂದು, ತಿಂದು ತೇಗಿ…..
ಬೆಳ್ಳಿ ಬಂಗಾರ ದಾನ
ಕುರಿ ಕೋಳಿ ಹೋಳಿಗೆ ನೈವೇದ್ಯ ಪಡೆದು,
ಓಡಿದರು.
ಲಕ್ಷ ಲಕ್ಷ ಕೋಟಿ ಕೋಟಿ…
ಹಣ ಖರ್ಚು ಮಾಡುವ ಬದಲು..
ಬದುಕಿರುವಾಗಲೇ ಸಾರ್ಥಕವಾಗು,
ನಿರ್ಜೀವ
ಸ್ಮಾರಕವೇಕೆ?
ಸಕಲ ಜೀವ ಸಂಕುಲಕೂ
ನಿನ್ನ ಪರಿಯ ಅರಿವಾಗಬೇಕು.
ಮರೆಯಾಗುವ ಈ “ಕಾಯ “ಕ್ಕೆ ಸ್ಮಾರಕ ಯಾಕೆ?
ನೀ… ಸತ್ತಮೇಲೂ…. ಸ್ಮಾರಕ ಬೇಕೇ?????
✍️ ಸಿ. ಮಹಾಲಕ್ಷ್ಮೀ,ಕೇಸರಹಟ್ಟಿ, ಗಂಗಾವತಿ
—–