ಅನುದಿನ ಕವನ-೧೦೫೦, ಕವಿಯಿತ್ರಿ: ರಂಹೊ, ತುಮಕೂರು


ಜೀವಂತ ಕವಿತೆಗಳು
ಎಷ್ಟೊಂದು
ಬದುಕಿಸುವಾಗ
ಉಪದೇಶಗಳು
ನೆಲ ಕಚ್ಚುತ್ತವೆ!


ಹಾಡುಗಳು
ಮೌನವನ್ನು
ನುಡಿಯುವಾಗ
ಎದೆಯ ಗಾಯಗಳು
ಹೂವಾಗುತ್ತವೆ!


ಮಾತುಗಳು
ಬದುಕಿಗೆ
ಬಣ್ಣವಾಗುವಾಗ
ಮುಖವಾಡಗಳು
ಸಾಯುತ್ತವೆ!


ಲೋಕದಲ್ಲಿ
ನಾಕವಿದೆ
ಜಗದ ಪಾಪಗಳಿಗೆ
ಸಮಾಧಾನವಿದೆ!


-ರಂಹೊ(ರಂಗಮ್ಮ ಹೊದೇಕಲ್), ತುಮಕೂರು