ಹೊಸಪೇಟೆ,ನ.19: ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಯುವ ಸಮೂಹ ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ದಾವಣಗೆರೆಯ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್ ನ ಹೃದಯ ರೋಗ ತಜ್ಞ ಡಾ. ಗುರುರಾಜ್ ಹೇಳಿದರು.
ನಗರದ ದಾವಣಗೆರೆಯ ಎಸ್ಎಸ್ ನಾರಾಯಣ ಹಾರ್ಟ್ ಸೆಂಟರ್ ಹಾಗೂ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಉಚಿತ ಹೃದಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ಮಾನಸಿಕ ಒತ್ತಡದಿಂದ ಕೂಡಾ ಅನಾರೋಗ್ಯ ಉಂಟಾಗುವುದು. ದ್ಯಾನ, ಯೋಗ ಮಾಡುವುದರಿಂದ ಬಿಪಿ, ಸಕ್ಕರೆ ಕಾಯಿಲೆ ಬರಲ್ಲ. ಜಂಕ್ ಪುಡ್ ತಿನ್ನವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾಂಸಹಾರವನ್ನು ಹೆಚ್ಚಾಗಿ ಸೇವಿಸಬಾರದು. ಹೆಚ್ಚಾಗಿ ಹಣ್ಣು ಹಂಪಲುಗಳನ್ನು ಸೇವಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಶಿವಪ್ಪ.ಕೆ ಮಾತನಾಡಿ, ಹೃದಯ ಇದ್ದರೆ ಮಾತ್ರ ಜೀವ ಇರಲು ಸಾಧ್ಯ. ಹೃದಯ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು. ಆಹಾರದ ಮೇಲೆ ಹಿಡಿತ ಸಾಧಿಸಬೇಕು. ಹೆಚ್ಚಾಗಿ ಆಹಾರ ಸೇವನೆಯಿಂದ ದೇಹಕ್ಕೆ ಇನ್ನಿತರ ರೋಗಗಳು ಉಲ್ಬಣಗೊಳ್ಳುತ್ತವೆ. ದುಶ್ಚಟಗಳಿಂದ ದೂರವಾಗಿ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು ಎಂದರು.
ದಾವಣಗೆರೆಯ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್ ನ ಕೋರ್ಡಿನೇಟರ್ ಪ್ರಸನ್ನಕುಮಾರ್ ಎ.ಬಿ ಮಾತನಾಡಿ, ಹೃದಯಾಘಾತ ಆದ ಒಂದು ಗಂಟೆಯ ಒಳಗೆ ಆಸ್ಪತ್ರೆ ಸೇರಿಸಿದರೆ ಜೀವ ಉಳಿಸಬಹುದು. ಹೃದಯ ಸಮಸ್ಯೆ ಇದ್ದರೆ ಆಸ್ಪತ್ರೆ ಭೇಟಿ ನೀಡಿ ಎಂದರು.
ಭೌತಶಾಸ್ತ್ರ ವಿಭಾಗದ ಪ್ರೊ. ದಾರುಕಸ್ವಾಮಿ ಟಿ.ಹೆಚ್.ಎಂ ಪ್ರಾಸ್ತವಿಕವಾಗಿ ಮಾತನಾಡಿ, ದೇವರು ವಾಸ ಮಾಡುವ ಜಾಗವೆಂದರೆ ಹೃದಯ ಮಾತ್ರ. ಹೃದಯದ ಬಗ್ಗೆ ಕಾಳಜಿ ಹೊಂದಬೇಕು. ಮನುಷ್ಯನ ಒತ್ತಡಗಳಿಂದ ರೋಗ ಉಲ್ಬಣಗೊಳುತ್ತದೆ. ಎಲ್ಲಾ ಜೀವರಾಶಿಗಳಲ್ಲಿ ಶ್ರೇಷ್ಠ ವಾದ ಪ್ರಾಣಿ ಮನುಷ್ಯ. ಪ್ರಮುಖ ವಾದ ಮುಖ್ಯವಾದ ಅಂಗ ಎಂದರೆ ಅದು ಹೃದಯ ಮಾತ್ರ ಎಂದರು.
ವೇದಿಕೆಯಲ್ಲಿ ಐಕ್ಯು ಎಸಿ ಸಂಚಾಲಕ ಗುರುರಾಜ್ ಅವರಾಧಿ, ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಗುಜ್ಜಲ ಹುಲುಗಪ್ಪ ಇದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಮುರಳೀಧರ ಬಿ.ಕೆ ಸ್ವಾಗತಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥಿಸಿದರು. ಪರಿಸರ ಅಧ್ಯಯನ ವಿಭಾಗದ ಉಪನ್ಯಾಸಕ ಅಮೃತ್ ನಾಯ್ಕ ನಿರೂಪಿಸಿ, ವಂದಿಸಿದರು.
—–