ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಗೆದ್ದೇ ಗೆಲ್ಲುವುದು ನಮ್ಮ ಭಾರತ

ಗೆದ್ದೇ ಗೆಲ್ಲುವುದು ನಮ್ಮ ಭಾರತ

ಗೆದ್ದೇ ಗೆಲ್ಲುವುದು ನಮ್ಮ ಭಾರತ

ಆರಂಭದಿ ಗಿಲ್ ಗುಟ್ಟುವ ಶುಭ್ ಮ್ಯಾನ್
ರನ್ ರೇಟ್ ಆರೋಹಿತ ರೋಹಿಟ್ ಮ್ಯಾನ್
ಕಿಂಗ್ ಕೋಹ್ಲಿಯ ಬ್ಯಾಟಿಂಗ್ ವಿರಾಡ್ರೂಪ
ಗೆಲುವಿನ ಶ್ರೇಯಸ್ಸೇ ಅಯ್ಯರ್ ಎಂಬ ಭೂಪ

ಕೆಲವೇ ಓವರ್ನಲ್ಲಿ ರನ್ ಹರಿಸುವ ರಾಹುಲ್
ಆರನೇ ಯಾದಿಯಲ್ಲಿ ಸೂರ್ಯನ ಕಮಾಲ್
ಬ್ತಾಟ್ ಹಿಡಿದರೆ ರವೀಂದ್ರ ಬೌಲರ್ಗೆ ಶೆಡ್ಡು
ಬಾಲ್ ಗಿರ ಗಿರ ತಿರುಗಿಸುವ ಬಲಾಡ್ಯ ಜಡ್ಡು

ಶಮಿಯ ಸ್ವಿಂಗ್ ಗೆ ಬ್ಯಾಟರ್ ಪಡೆ ದೂಮ್ರ
ಫ್ರೀಹಿಟ್ ನಲ್ಲೂ ಬೆಸ್ಟ್ ಯಾರ್ಕರ್ ಬೂಮ್ರಾ
ಸ್ಪಿನ್ ಸಾಮ್ರಾಜ್ಯಕೆ ಕುಲ್ದೀಪನೆ ಮಹಾರಾಜ
ಮದಗಜಗಳಿಗೆ ಆಹಾರವಾಗದಿರಲಿ ಸಿರಾಜ

ಹತ್ತರಲ್ಲೂ ಬ್ಲೂ ಬಾಯ್ಸ್ ದೇ ಗೆಟ್ ಆಪ್
ಹನ್ನೊಂದರಲ್ಲಿ ತೋರಿದರೆ ವರ್ಲ್ಡ ಕಪ್
ದಡ ಸೇರಿಸುವನು ನಾವಿ(ಯ)ಕ ರೋಹಿತ
ಗೆದ್ದೇ ಗೆಲ್ಲುವುದು ವಿಶ್ವಕಪ್ ನಮ್ಮ ಭಾರತ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.