ಅಳವಂಡಿ:ಸೇವೆ ಖಾಯಂ ಮಾಡಲು ಆಗ್ರಹಿಸಿ ಸರಕಾರಿ ಪದವಿ ಕಾಲೇಜು ಅತಿಥಿ ಉಪ್ಯಾಸಕರ ಪ್ರತಿಭಟನೆ

ಅಳವಂಡಿ(ಕೊಪ್ಪಳ ಜಿ.)28: ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ಸೇವಾಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ, ಅಳವಂಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಮಂಗಳವಾರ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.                ಅತಿಥಿ ಉಪನ್ಯಾಸಕರ ಸಂಘದ ಮುಖಂಡ ಪ್ರದೀಪ್ ಪಲ್ಲೇದ್  ಮಾತನಾಡಿ, ಅತಿಥಿ ಉಪನ್ಯಾಸಕರಾಗಿ  ಸುಮಾರು  ವರ್ಷಗಳಿಂದ  ಸೇವೆ ಸಲ್ಲಿಸುತ್ತಿರುವ  ತಮ್ಮನ್ನು ಕಾಯಂಗೊಳಿಸಿ, ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.                                                 ಅಗತ್ಯ ಅರ್ಹತೆ ಇದ್ದು, ಸುಮಾರು  ವರ್ಷಗಳ ಅನುಭವವಿದ್ದರೂ ಸರಕಾರ ನಮ್ಮ ಬೇಡಿಕೆಗಳಿಗೆ  ಸ್ಪಂದಿಸದಿರುವುದು ನಿಜಕ್ಕೂ ಬೇಸರದ ಸಂಗತಿ ಈ ಬಗ್ಗೆ  ಸರಕಾರ ಸ್ಪಂದಿಸುವವರೆಗೂ  ನಮ್ಮ ಹೋರಾಟ ನಿರಂತರವಾಗಿರುತ್ತದೆ  ಎಂದರು.

ಈ  ಸಂದರ್ಭ ದಲ್ಲಿ  ಅತಿಥಿ ಉಪನ್ಯಾಸಕರಾದ ವೆಂಕಟೇಶ್, ಇಬ್ರಾಹಿಂ ಸಾಬ್, ಸಿದ್ದಪ್ಪಾ, ರಹಿಮಾನ್, ರಾಘವೇಂದ್ರ, ವಿಜಯ್, ದೇವರಾಜ್, ಮಹೇಶ್ ಮತ್ತಿತರರು ಇದ್ದರು.