ನಾಲ್ಕು ಹನಿಗವನಗಳು
೧. ಉಚಿತ
ನಿಮ್ಮ ನಡೆಯಲ್ಲೇ
ನನ್ನೀ ನಡಿಗೆ
ಎನ್ನುತ್ತಿದ್ದವಳು ಆಗ ;
ಸರಕಾರದಿಂದ ಸೌಲಭ್ಯ
ಭರಪೂರ ಸಿಗುವಾಗ
ಅವಳೆ ಯಜಮಾನಿ ಮನೆಗೀಗ.
೨. ಪರಿಣಾಮ
ಕುಡಿದು ತೂರಾಡುತ್ತ
ಮನೆಗೆ ಬಂದರೂ
ಮೌನ ವಹಿಸುತ್ತಿದ್ದ ನನ್ನಾಕೆ ;
ಮೂರು ಹೊತ್ತು ದುಡಿದು
ಮೌನವಾಗಿದ್ದರೂ
ಕಣ್ಣಲ್ಲೇ ಕೇಳುವಳು
ನಿನ್ನ ಹಂಗು ಎನಗ್ಯಾಕೆ !?.
೩. ಖುಷಿ
ಸರ್ಕಾರದಿಂದ ಸಿಗುವ
ಎರಡು ಸಾವಿರ
ಮಹಿಳೆಯರ ಮೊಗದಲ್ಲಿ
ಭಾರಿ ಖುಷಿ ;
ಕೆಲ ಗಂಡಸರ
ಮೊಗದಲ್ಲಿ
ಹೇಳಿಕೊಳ್ಳಲಾಗದ
ಕಸಿವಿಸಿ.
೪. ದರ್ಶನ
ಪ್ರಯಾಣದ
ಉಚಿತದಿಂದ
ಮಹಿಳೆಯರು
ಗುಡಿ – ಗುಂಡಾರಗಳ ದರ್ಶನ ! ;
ಮಹಿಳೆಯರ
ತಂಡೋಪ ತಂಡ
ನೋಡಿದ ಗಂಡಸರಿಗೆ
ನಿಜಕ್ಕೂ ಯಮ ದರ್ಶನ !!.
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ