ಅನುದಿನ ಕವನ-೧೦೭೯, ಮೂಲ ಕವಿ: ಪ್ಯಾಬ್ಲೊ ನೆರೂಡ, ಕನ್ನಡಕ್ಕೆ : ಪ್ರೊ. ಶಾಂತಮೂರ್ತಿ ಕುಲಕರ್ಣಿ, ಹೂವಿನ ಹಡಗಲಿ ಕವನದ ಶೀರ್ಷಿಕೆ: ಪ್ರೀತಿಸುವೆ

ಪ್ರೀತಿಸುವೆ

.ನಾ ನಿನ್ನ ಪ್ರೀತಿಸುವೆ
ಎಲ್ಲಿ, ಹೇಗೆ, ಯಾವಾಗ
ಎಂಬುದನರಿಯದೇ.

ನಾನು ಪ್ರೇಮಿಸುವೆ
ಸರಳ,ಸಹಜವಾಗಿ
ತೊಂದರೆ -ಅಹಮಿಕೆ ಇಲ್ಲದೇ.

ನಾನು ನಿನ್ನ ಪ್ರೀತಿಸುವೆ
ಇದೊಂದೇ ರೀತಿಯಲಿ
ಮತ್ತೊಂದ ಅರಿಯದೆ.


ಮೂಲ : ಪ್ಯಾಬ್ಲೊ ನೆರೂಡ


ಕನ್ನಡಕ್ಕೆ : ಪ್ರೊ. ಶಾಂತಮೂರ್ತಿ ಕುಲಕರ್ಣಿ, ಹೂವಿನಹಡಗಲಿ
——