ಅನುದಿನ ಕವನ-೧೦೮೦, ಕವಿ: ಮೆಳೇಕಲ್ಲಳ್ಳಿ ಉದಯ, ತುಮಕೂರು, ಕವನದ ಶೀರ್ಷಿಕೆ: ಪ್ರೀತಿ

ಪ್ರೀತಿ
ದಿನವೂ
ನಿನ್ನ ಕಣ್ಣೊಳಗೆ ಕಳೆದು
ಹುಬ್ಬುಗಳಿಗೆ ತುಟಿಯಿಡುವ ಕನಸು.
ನೀನು
ರೆಂಬೆ.ಕೊಂಬೆಯಲಿ ಕೊನರಿದ.
ಚೈತ್ರದ ಅರಳುಗಣ್ಣು.
ಪ್ರೀತಿ ಗೆಳತಿ
ಈಗ ಎಷ್ಟೂಂದು ಬೆಳೆದಿದ್ದೇವೆ.
ಕಾಲದ ಕುರೂಪದಲಿ_ಮಸಗಿ
ಮಸಣವಾಗಿದ್ದೇವೆ.
ಚುಂಬಿಸ ಹೊರಟಿದ್ದೇವೆ ಸಾವು
ಅದರೊಳಗಿನ ನೋವು.
ಈ ಬದುಕು ಕೋಳಿ ಕೆದರಿದ ತಿಪ್ಪೆ_
ಎದೆಯ ಗೋರಿಯ ಮೇಲೆ
ಚಿಗುರಿದ ದತ್ತೂರಿ ಹೂಗನಸು.
ಕಳೆದು ಹೋದ ಕನಸ ಪರಿಸೆ.
ನಿನ್ನ ಗುಳಿಗಲ್ಲ
ಅರಳುಗಣ್ಣಿನ ನೆನಪಿಗೆ.
ನದಿ ಹಾಡಿ ಬಿರಿಯುತ್ತವೆ
ಬಣ್ಣ ಬಣ್ಣದ ಕಾಡು ಹೂವು.
ತುಕ್ಕುಹಿಡಿದ ನೆನಪುಗಳೀಗ.
ಜೀವ ಹಿಂಡುವ ಕುಟುಕು ಮುಳ್ಳು.


-ಮೆಳೇಕಲ್ಲಳ್ಳಿ ಉದಯ, ತುಮಕೂರು