ಬಳ್ಳಾರಿ: ಸಾಮಾಜಿಕ ಜಾಲತಾಣಗಳು ಪ್ರಭಾವಿ ಮಾಧ್ಯಮಗಳಾಗಿ ಪರಿವರ್ತನೆಗೊಂಡಿವೆ ಎಂದು ಬಳ್ಳಾರಿ ವಲಯದ ಮಹಾ ನಿರೀಕ್ಷಕ(ಐಜಿಪಿ) ಎಂ. ನಂಜುಂಡಸ್ವಾಮಿ ಅವರು ಹೇಳಿದರು.
ಅವರು ಭಾನುವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಸಾರಥ್ಯದ ಕರ್ನಾಟಕ ಕಹಳೆ ಡಾಟ್ ಕಾಮ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮುಖ್ಯವಾಹಿನಿ ಪತ್ರಿಕಾ, ವಿದ್ಯುನ್ಮಾನ ಮಾಧ್ಯಮಗಳಿಗಿಂತ ವೆಬ್ ಮೀಡಿಯಾ, ಸಾಮಾಜಿಕ ಜಾಲತಾಣಗಳು ಪ್ರಭಾವಿ ಮಾಧ್ಯಗಳಾಗಿ ಜನಪ್ರಿಯವಾಗುತ್ತಿವೆ ಎಂದು ತಿಳಿಸಿದರು.
ಅಂಗೈ ಮೊಬೈಲ್‌ನಲ್ಲಿ ಜನರಿಗೆ ಬೇಕಾದ ಎಲ್ಲಾ ಮಾಹಿತಿ ದೊರಕುತ್ತಿದೆ. ಪತ್ರಿಕಾ ಓದುಗರು ನೋಡುಗರಾಗುತ್ತಿದ್ದಾರೆ ಹೀಗಾಗಿ ವೆಬ್‌ಗಳು ಜನರಿಗೆ ಹತ್ತಿರವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವ್ಯಾಟ್ಸಪ್, ಟ್ವಿಟ್ಟರ್,ಇನ್ಸ್ಟ್ರಾಗ್ರಾಮ್ , ಯೂ ಟ್ಯೂಬ್‌ಗಳನ್ನು ಬಳಸದವರೇ ಇಲ್ಲ. ದೊಡ್ಡ ಮಾಧ್ಯಮಗಳು ನಿರ್ಲಕ್ಷಿಸುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ಸಂಬಂಧಿಸಿದವರ ಗಮನ ಸೆಳೆಯುತ್ತಿರುವುದು ಇವುಗಳ ಜನಪ್ರಿಯತೆಗೆ ಸಾಕ್ಷಿ ಎಂದರು.
ಮಾಧ್ಯಮಗಳು ದನಿ ಇಲ್ಲದವರ ದನಿಯಾಗಿ ಕಾರ್ಯನಿರ್ವಹಿಸಬೇಕು ಈ ನಿಟ್ಟಿನಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ತಿರಸ್ಕೃತ, ತಳಸಮುದಾಯಗಳು, ದಮನಿತರ, ಶೋಷಿತರ ದನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ನಂಜುಂಡಸ್ವಾಮಿ ಅವರು ಸಲಹೆ ನೀಡಿದರು.
ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹೊಣೆ ಪ್ರತಿ ಸಮುದಾಯದ ಮೇಲಿದೆ. ನಮ್ಮ ಸಂಸ್ಕೃತಿಯ ಕುರುಹುಗಳನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕು. ಕಹಳೆ ಅಪ್ಪಟ ಕನ್ನಡಿಗರ ಹೆಗ್ಗುರುತು. ಕರ್ನಾಟಕ ಕಹಳೆ ಜನಪರವಾಗಿ ದನಿ ಎತ್ತುವ ಮೂಲಕ ಕನ್ನಡ ನಾಡಿನ ಮನೆಮಾತಾಗಲಿ ಎಂದು ಮನಂ ಅವರು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ವಿಚಾರವಾದಿ, ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರು ಮಾತನಾಡಿ ನಾಡಿನ ವೀರವನಿತೆ ಒನಕೆ ಓಬವ್ವಳ ತವರೂರು ಅವಿಭಜಿತ ಬಳ್ಳಾರಿ ಜಿಲ್ಲೆಯ ಗುಡೆಕೋಟೆ. ಓಬವ್ವ ಕಹಳೆ ಮನೆತನಕ್ಕೆ ಸೇರಿದವಳು. ಸರಕಾರ ವೀರವನಿತೆ ಓಬವ್ವಳ ಸ್ಮಾರಕವನ್ನು ಗುಡೆಕೋಟೆಯಲ್ಲಿ ನಿರ್ಮಿಸುವ ಮೂಲಕ ಗೌರವಿಸಬೇಕು ಎಂದು ಒತ್ತಾಯಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಸಂಪಾದಕ ಸಿ.ಮಂಜುನಾಥ್, ಐತಿಹಾಸಿಕ ನೆಲ ಬಳ್ಳಾರಿಗೂ ಕನ್ನಡ ಪತ್ರಿಕೋದ್ಯಮಕ್ಕೂ ವಿಶೇಷ ನಂಟಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆ ಕನ್ನಡ ಸಮಾಚಾರ ಹೆಸರು ಬದಲಾಯಿಸಿಕೊಂಡು ಬಳ್ಳಾರಿಯಿಂದ ಪ್ರಕಟವಾಗಿದ್ದನ್ನು ಇತಿಹಾಸ ತಿಳಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಕಹಳೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತದೆ. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತದೆ ಎಂದರು.
ಕರ್ನಾಟಕ ಸಮರ ಸೇನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ ಸಿ ಕೋಳೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ, ಡಿಎಸ್‌ಎಸ್(ಭೀಮವಾದ) ಜಿಲ್ಲಾಧ್ಯಕ್ಷ ಬೈಲೂರು ಮಲ್ಲಿಕಾರ್ಜುನ, ಮುಖಂಡರಾದ ಬೈಲೂರು ನಾಗೇಂದ್ರ, ಶರಣ ಬಸವ, ಛಾಯಾಗ್ರಾಹಕರಾದ ಶಿವರಾಜ ಗೌಡ, ರುದ್ರಮುನಿ ಸ್ವಾಮಿ, ಯುವ ಸಂಘಟಕ ಮಧುರಾಜ್ ಉಪಸ್ಥಿತರಿದ್ದರು. ಯಶವಂತ್ ಶ್ರೀಹರಿ ನಿರ್ವಹಿಸಿದರು.
ರಾಮಸಾಗರದ ಕಹಳೆ ವಾದಕರಾದ ವಸಂತಕುಮಾರ್ ಮತ್ತು ಮಲ್ಲಿಕಾರ್ಜುನ ವಿಶಿಷ್ಟ ಧಿರಿಸು, ಕಹಳೆ ವಾದನದ ಮೂಲಕ ಗಮನ ಸೆಳೆದರು.

ಅಭಿನಂದನೆಗಳು ಸರ್, ಕಹಳೆಗೆ ನಮ್ಮ ಶುುುಭಾಶಯಗಳು.
ಹೃದಯ ಪೂರ್ವಕ ಅಭಿನಂದನೆಗಳು…ಸರ್ ಕಹಳೆ ಮುಂದಿನ ದಿನಗಳಲ್ಲಿ ನವಯುಗಕ್ಕೆ ಹೋಗಲಿದೆ ಎಂದು ಹಾರೈಸುವೆ…