ಅನುದಿನ ಕವನ-೧೦೮೮, ಕವಿಯತ್ರಿ: ರಂಹೊ, ತುಮಕೂರು

ಅವರು
ಸುರಿದ ಕೆಂಡ
ಕಂದೀಲಾಯ್ತು!

ಎಸೆದ ಮುಳ್ಳು
ಎಚ್ಚರಿಕೆಯಾಯ್ತು!

ಹಚ್ಚಿದ ಕಿಚ್ಚು
ಆತ್ಮ ವಿಶ್ವಾಸವಾಯ್ತು!

ತೂರಿದ
ಕಲ್ಲುಗಳೆಲ್ಲ
ಮೆಟ್ಟಿಲುಗಳಾದವು!

ಎಸೆದ
ಮಾತುಗಳೆಲ್ಲ
ಹೊಸ ಹಾಡುಗಳಾದವು!

ಮತ್ತೇನು
ಪ್ರೀತಿ ಮತ್ತು ಮೌನ
ಜೀವ ಚೈತನ್ಯವಾದವು!


-ರಂಹೊ(ರಂಗಮ್ಮ ಹೊದೆಕಲ್), ತುಮಕೂರು
—–