ಹೊಸ ಮಳಿಗೆಯಲ್ಲಿ ಜನವರಿ 5ರಿಂದ ಜನವರಿ 9ರವರೆಗೆ ವಿಶೇಷ ವಿವಾಹದ ಆಭರಣ ಪ್ರದರ್ಶನ
ಬಳ್ಳಾರಿ, ಜ.5: ದಕ್ಷಿಣ ಭಾರತದ ಅತ್ಯಂತ ಪ್ರೀತಿಪಾತ್ರ ಆಭರಣ ಬ್ರಾಂಡ್ ಪಿಎಂಜೆ ಜ್ಯೂವೆಲ್ಸ್ ಶುಕ್ರವಾರ ನಗರದಲ್ಲಿ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸಿತು. ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬಳ್ಳಾರಿಯಲ್ಲಿ ಪಿಎಂಜೆ ಜ್ಯೂವೆಲ್ಸ್ ಮಳಿಗೆ ಆರಂಭವಾಗುವ ಮೂಲಕ ಗಣಿ ನಾಡಿನಲ್ಲಿ ವಿಸ್ತರಣೆಯಾಗಿರುವುದು ಕಂಡು ಸಂತೋಷವಾಗಿದೆ ಎಂದರು.
ಗುಣಮಟ್ಟ ಮತ್ತು ಕರಕುಶಲತೆಗೆ ಅವರ ಬದ್ಧತೆಗೆ ಅವರ ಬದ್ಧತೆ ಪ್ರಶಂಸನೀಯ ಮತ್ತು ಈ ಹೊಸ ಮಳಿಗೆಯು ಬಳ್ಳಾರಿಯ ಹಾಗೂ ಸುತ್ತಮುತ್ತಲಿನ ಜನರಿಗೆ ಆಭರಣ ಖರೀದಿ ಅನುಭವವನ್ನು ಉನ್ನತೀಕರಿಸುತ್ತದೆ ಎಂದು ನಂಬಿದ್ದೇನೆ” ಎಂದು ಹೇಳಿದರು.
ಹೊಸ ಮಳಿಗೆ ಆರಂಭಗೊಂಡ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ ಪಿಎಂಜೆ ಜ್ಯೂವೆಲ್ಸ್ ಬಿಸಿನೆಸ್ ಹೆಡ್ ರಾಮ್ ರೆಡ್ಡಿ ಅವರು, “ಪಿಎಂಜೆ ಜ್ಯೂವೆಲ್ಸ್ ನ್ನು ಬಳ್ಳಾರಿಗರ ಹತ್ತಿರಕ್ಕೆ ತರಲು ಬಹಳ ಸಂತೋಷ ಹೊಂದಿದ್ದೇವೆ. ನಮ್ಮ ಬ್ರಾಂಡ್ ಸದಾ ದೃಢೀಕರಣ, ಆವಿಷ್ಕಾರ ಮತ್ತು ಜೀವನದ ಅಮೂಲ್ಯ ಕ್ಷಣಗಳ ಸಂಭ್ರಮಾಚರಣೆಯಲ್ಲಿ ಸದಾ ಸನ್ನದ್ಧವಾಗಿರುತ್ತದೆ. ಹೊಸ ತಾಣದಲ್ಲಿ ನಮ್ಮ ಅತ್ಯುತ್ತಮ ಸಂಗ್ರಹಗಳು ಮತ್ತು ಅಸಾಧಾರಣ ಸೇವೆಯೊಂದಿಗೆ ನಮ್ಮ ಪೋಷಕರಿಗೆ ಸೇವೆ ಒದಗಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದು ತಿಳಿಸಿದರು.
ಪಿಎಂಜೆ ಜ್ಯೂವೆಲ್ಸ್ ಬಳ್ಳಾರಿಯ ಸ್ಟೋರ್ ಮ್ಯಾನೇಜರ್ ಖಾಜಾ ಬಾಬು, ನಗರದ ಹೃದಯಭಾಗದಲ್ಲಿ ಆಭರಣ ಪ್ರಿಯರಿಗೆ ಬೆರಗುಗೊಳಿಸುವ ಮಳಿಗೆಯ ತಾಣವನ್ನು
ಆರಂಭಿಸಿರುವುದು ಸಂಸ್ಥೆಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಪಾಲಿಕೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಶ್ರೀನಿವಾಸ ರೆಡ್ಡಿ ಸೇರಿದಂತೆ ನಗರದ ಗಣ್ಯ ಉದ್ಯಮಿಗಳು,ಆಹ್ವಾನಿತ ಅತಿಥಿಗಳು ಮತ್ತು ವಿಶೇಷ ಗ್ರಾಹಕರು ಈ ಅಮೂಲ್ಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜ. 5ರಿಂದ ಜ. 9ರವರೆಗೆ ವಿಶೇಷ ವಿವಾಹದ ಆಭರಣ ಪ್ರದರ್ಶನವನ್ನು ಹೊಸ ಪಿಎಂಜೆ ಮಳಿಗೆಯಲ್ಲಿ ಆಯೋಜಿಸಲಾಗುತ್ತದೆ. ಈ ಹೊಸ ಮಳಿಗೆಯ ಪ್ರಾರಂಭದಲ್ಲಿ ಮೊದಲ ಆರು ದಿನಗಳು ಎಲ್ಲ ಆಹ್ವಾನಿತರಿಗೂ ಆಶ್ಚರ್ಯಕರ ಚಿನ್ನದ ನಾಣ್ಯದ ಕೊಡುಗೆಯೂ ಇರುತ್ತದೆ.
ಪಿಎಂಜೆ ಜ್ಯೂವೆಲ್ಸ್ ನ ಹೊಸ ಮಳಿಗೆಯು ವಿಶೇಷವಾಗಿ ರೂಪಿಸಲಾದ ಆಭರಣದ ಪ್ರದರ್ಶನ ಹೊಂದಿದ್ದು ಕ್ಲಾಸಿನ್ ಡಿಸೈನ್ ಗಳಿಂದ ಸಮಕಾಲೀನ ಮಾಸ್ಟರ್ ಪೀಸ್ ಗಳವರೆಗೆ ವಿಸ್ತಾರ ಅಭಿರುಚಿಗಳು ಮತ್ತು ಆದ್ಯತೆಗಳಿಗೆ ಪೂರೈಸುತ್ತವೆ. ಈ ಮಳಿಗೆಯು ಚಿನ್ನ, ವಜ್ರ, ಪೊಲ್ಕ ಮತ್ತು ಅಮೂಲ್ಯ ಹರಳುಗಳ ವಿಸ್ತಾರ ಶ್ರೇಣಿ ಹೊಂದಿದ್ದು ಇದು ಬ್ರಾಂಡ್ ನ ಗುಣಮಟ್ಟ, ಆವಿಷ್ಕಾರ ಮತ್ತು ಗ್ರಾಹಕರ ಸಂತೃಪ್ತಿಗೆ ಬದ್ಧತೆಯನ್ನು ಪ್ರತಿಫಲಿಸುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
——