ಅನುದಿನ ಕವನ-೧೧೦೦, ಕವಿ: ಅಪ್ಪಗೆರೆ ಲಂಕೇಶ್, ಬೆಂಗಳೂರು, ಕವನದ ಶೀರ್ಷಿಕೆ: ಅಕ್ಷರದವ್ವ….

ಅಕ್ಷರದವ್ಟ….

ಶತಮಾನಗಳ
ಅಕ್ಷರದಂಧತೆಗೆ
ಕಣ್ಣು ತೆರೆದ ತಾಯಿ
ಜ್ಯೋತಿಯ ಮಾರ್ಗಪಾಲಕಿ..,

ಹೆಣ್ಣೆಂಬ
ಗಂಡಿನ ದಾಸ್ಯಕೆ
ಮುಕ್ತಿಯ ಮೊದಲ ಮೊಳೆ
ಹೊಡೆದ ನಾಯಕಿ….,

ಬಿಳಿತೊಗಲ
ಕ್ರೂರ, ಕೊಳಕು ಮನದ
ಆರ್ಯರ ಕಾನೂನುಗಳನ್ನೇ
ಮುರಿದು ನಿಂತ ಸಾಧಕಿ….,

ಪ್ಲೇಗೆಂಬ
ಮಹಾಮಾರಿಯ ತೊಲಗಿಸಲು
ಕರುಣೆಯ ಕೈಚಾಚಿ, ಜೀವ ತೊರೆದ
ಮಹಾ ಶುಶ್ರೂಷಕಿ…,,

ಭಾರತದ
ನವಪ್ರಪಂಚದ ಅಸ್ಪೃಷ್ಯರಿಗೆ
ಶಾಲೆತೆರೆದು ಅಕ್ಷರ ಕಲಿಸಿದ
ಮೊದಲ ಶಿಕ್ಷಕಿ…,

ಅಕ್ಷರದವ್ವ..,
ಸಾವಿತ್ರಿ ಬಾಫುಲೆ
ನಿಜಕ್ಕೂ ನೀ ನಮ್ಮ ಬೆಳಗಿದೆಯವ್ವ,
ನೀ ಬೋಧಿಸತ್ವಳೇ ತಾಯಿ,
ನಿನಗೆ ನಮ್ಮ
ಕೋಟಿ ಕೋಟಿ ನಮನಗಳು
ಅಕ್ಷರದವ್ವ…,, ನಮ್ಮ ಅಕ್ಷರದವ್ವ..,,


-ಅಪ್ಪಗೆರೆ ಲಂಕೇಶ್, ಬೆಂಗಳೂರು
—–