ಸಂಡೂರಿನ ಜೋಗದ ಹೆಚ್.ಹುಲಿಗೆಮ್ಮಗೆ ಪಿ.ಎಚ್.ಡಿ ಪದವಿ ಪ್ರದಾನ

ಬಳ್ಳಾರಿ, ಜ.13: ಜಿಲ್ಲೆಯ ಸಂಡೂರು ತಾಲೂಕಿನ ಜೋಗ ಗ್ರಾಮದ ಹೆಚ್. ಹುಲಿಗೆಮ್ಮ ಅವರಿಗೆ ಹಂಪಿ
ಕನ್ನಡ ವಿಶ್ವವಿದ್ಯಾಲಯ ಪಿ.ಎಚ್ ಡಿ ಪದವಿ ನೀಡಿ ಗೌರವಿಸಿತು.


ಗ್ರಾಮದ ಯಂಕಪ್ಪ ಹಾಗೂ ಈರಮ್ಮ ಅವರ ಪುತ್ರಿ ಹೆಚ್. ಹುಲಿಗೆಮ್ಮ ಅವರು ಬಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಆಂತರಿಕ ಮಾರ್ಗದರ್ಶನಕರಾದ ಡಾ. ಎಸ್. ಎ. ಗೋವರ್ಧನ ಅವರ ಮಾರ್ಗದರ್ಶನದಲ್ಲಿ “ದಲಿತರ ರಾಜಕೀಯ ಸಬಲೀಕರಣ”(ಸಂಡೂರು ಮತ್ತು ಹೊಸಪೇಟೆ ತಾಲೂಕುಗಳನ್ನು ಅನುಲಕ್ಷಿಸಿ )ಎಂಬ ಶೀರ್ಷಿಕೆ ಅಡಿ ಮಹಾಪ್ರಬಂಧ ರಚಿಸಿ ವಿವಿಗೆ ಮಂಡಿಸಿದ್ದರು.
ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ, ಅಧಿನಿಯಮ ಹಾಗೂ ಪಿಎಚ್.ಡಿ ಪದವಿ ನಿಯಮಗಳನ್ನು ಅನುಸಾರ ಮಹಾಪ್ರಬಂಧ ಅತ್ಯುತ್ತಮ ಶ್ರೇಣಿಯದ್ದು ಎಂದು ಪರಿಗಣಿಸಿ ಜ. ೧೦ ರಂದು ನಡೆದ ೩೨ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆಗಿರುವ ವಿವಿ ಸಮ‌ ಕುಲಾಧಿಪತಿ
ಡಾ. ಎಂ.ಸಿ ಸುಧಾಕರ್ ಅವರು ಹೆಚ್. ಹುಲಿಗೆಮ್ಮ ಅವರಿಗೆ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪ್ರಧಾನ ಮಾಡಿದರು.


ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ, ನಾಡೋಜ ಪುರಸ್ಕೃತರಾದ ಡಾ.ಬಸವಲಿಂಗ ಪಟ್ಟ ದೇವರು, ಪ್ರೊ. ತೇಜಸ್ವಿ ವಿ. ಕಟ್ಟಿಮನಿ, ಡಾ. ಎಸ್. ವಿ .ಶರ್ಮ, ಅನಂತಪುರದ ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿ.ಕೋರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ ಪೂಣಚ್ಚ, ಅಧ್ಯಯನಾಂಗದ ನಿರ್ದೇಶಕ ಡಾ.ಪಿ. ಮಹದೇವಯ್ಯ, ಪ್ರಸಾರಾಂಗದ ನಿರ್ದೇಶಕಿ ಡಾ. ಶೈಲಜ ಇಂ. ಹಿರೇಮಠ, ಭಾಷಾ ನಿಕಾಯದ ಡೀನರಾದ ಡಾ. ಎಫ್ .ಟಿ.ಹಳ್ಳಿಕೇರಿ, ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ. ಚೆಲುವರಾಜ, ಲಲಿತ ಕಲೆಗಳ ನಿಕಾಯದ ಡೀನರಾದ ಡಾ. ಶಿವಾನಂದ ವಿರಕ್ತಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
——-