ಜೀವನದಲ್ಲಿ ಉನ್ನತ ಸಾಧನೆ ಮಾಡಲು ಉತ್ತಮ‌ಶಿಕ್ಷಣ ಅಗತ್ಯ -ಡಿಎಚ್ಓ ಡಾ. ರಮೇಶ ಬಾಬು

ಸಿರುಗುಪ್ಪ, ಜ.19:ಜೀವನದಲ್ಲಿ ಉನ್ನತ ಸಾಧನೆ ಮಾಡಲು ಉತ್ತಮ‌ಶಿಕ್ಷಣ ಅಗತ್ಯ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಮೇಶ ಬಾಬು ಅವರು ಹೇಳಿದರು.
ತಾಲೂಕಿನ ತೆಕ್ಕಲಕೋಟೆಯ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹತ್ತನೇತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ವೃತ್ತಿ ಮಾರ್ಗದರ್ಶನ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತನೇ ತರಗತಿ ಬಳಿಕ ಹಲವು ಅತ್ಯುತ್ತಮ ಅವಕಾಶಗಳಿದ್ದು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಜಿಲ್ಲಾ ಪ್ರೋಗ್ರಾಮ್ ಅಧಿಕಾರಿ ಡಾ. ವೀರೇಂದ್ರಕುಮಾರ್ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ಅವರು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಮಂಜುನಾಥ್ ಅವರು ವಹಿಸಿದ್ದರು.
ಮೂವರು ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಮದ್ಯಾಹ್ನದ ಬಿಸಿಯೂಟವನ್ನು ಸವಿದು ಶುಚಿ ರುಚಿಯ ಬಗ್ಗೆ ಪ್ರಶಂಸೆ ವ್ಯಕ್ರಪಡಿಸಿದರು.
ಅಧಿಕಾರಿಗಳೊಂದಿಗೆ ವಿದ್ಯಾರ್ಥಿನಿಯರಾದ ಕು.ಧನಲಕ್ಷ್ಮಿ, ಕು. ಮುಸ್ಸಿ ಐಶ್ವರ್ಯ, ಕು.ಜ್ಯೋತಿ, ಕು.ದೇವಿರಮ್ಮ ಸಂವಾದ ನೆಡೆಸಿದರು.
ತೆಕ್ಕಲಕೋಟೆ ಸಿಆರ್ ಪಿ ಮಹಮದ್ ಫಯಾಜ್ ,ಹಾಗೂ ಶಾಲಾಶಿಕ್ಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೂವರು ಅತಿಥಿಗಳನ್ನು ಸನ್ಮಾನಿಸಲಾಯಿತು.
ಶಾಲೆಯ ಹಿರಿಯ ಶಿಕ್ಷಕಿ ಅಕ್ಕಮಹಾದೇವಿ ಅವರು ನಿರ್ವಹಿಸಿದರು. ಶಿಕ್ಷಕಿ ನಾಗವೇಣಿ ಅವರು ವಂದಿಸಿದರು.
*****