ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೊಂದು ನಮನ -ಬಿ ಎಂ ಹನೀಫ್, ಹಿರಿಯ ಪತ್ರಕರ್ತರು, ಬೆಂಗಳೂರು

ಸಂವಿಧಾನ ಶಿಲ್ಪಿಗೊಂದು ನಮನ

ವಿಶ್ವದ ಅತಿದೊಡ್ಡ ಪ್ರತಿಮೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ‌ ಸ್ಥಾಪನೆಯಾಗಿದೆ. 206 ಅಡಿ ಎತ್ತರದ ಈ ಪ್ರತಿಮೆಗೆ “ಸಾಮಾಜಿಕ ನ್ಯಾಯದ ಪ್ರತಿಮೆ” ಎಂದು ಇದಕ್ಕೆ ಹೆಸರಿಡಲಾಗಿದೆ.
ಈಗೇನಿದ್ದರೂ ಭಾರತದಲ್ಲಿ ಪ್ರತಿಮೆಗಳ ರಾಜಕೀಯದ ಕಾಲ. ಆದರೆ ಪ್ರತಿಮಾ ರಾಜಕೀಯದ ಎಲ್ಲ ವಾದ ವಿವಾದಗಳ ಆಚೆಗೆ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ಈ ಸಾಧನೆಯನ್ನು ಗಮನಿಸಬೇಕಿದೆ. ಭಾರತದ ಸಂವಿಧಾನ ಶಿಲ್ಪಿಗೆ ಇಂತಹದ್ದೊಂದು ಗೌರವ ಸಲ್ಲಿಕೆ ದಕ್ಷಿಣ ಭಾರತದಲ್ಲಿ ಆಗಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ನ್ಯಾಯವಾಗಿ ನೋಡುವುದಾದರೆ ಈ ಬೃಹತ್ ಪ್ರತಿಮೆ ನವದೆಹಲಿಯಲ್ಲಿ ಸ್ಥಾಪನೆ ಆಗಬೇಕಿತ್ತು. ದೇಶದ ಸಂವಿಧಾನದ ಸಾರ್ವಭೌಮತೆ, ಸಮಾನತೆ, ಸಮಾಜವಾದ ಮತ್ತು‌ ಭ್ರಾತ್ವತ್ವದ ಸಾರ್ವಕಾಲಿಕ ಮೌಲ್ಯಗಳನ್ನು ಎತ್ತಿ ಹಿಡಿದು ಭಾರತೀಯರನ್ನು ಒಗ್ಗೂಡಿಸುವ ಮಂತ್ರ ಶಕ್ತಿ ಕೇಂದ್ರ ಇದಾಗಬೇಕಿದೆ.

-ಬಿ.ಎಂ. ಹನೀಫ್, ಹಿರಿಯ ಪತ್ರಕರ್ತರು, ಬೆಂಗಳೂರು