ಅನುದಿನ ಕವನ-೧೧೨೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ

ಜನರ ಟೀಕೆ ಟಿಪ್ಪಣಿಗಳು
ಈಗೀಗ ಗೌಣ
ನನ್ನತನವೇ… ಮಾನ್ಯ !

ಸಮಜಾಯಿಷಿ ಕೊಡುವ ಗೋಜಿಗೂ
ಹೋಗದ ನಾನು ,
ಅವರ ಕಣ್ಣಿಗೆ ಸುಖಿಯೋ
ದುಃಖಿಯೋ… ಬಲ್ಲವರಾರು ?!

ಮೌನದ ಪರದೆಯ ಎಳೆದಾಗ
ಚಡಪಡಿಸುವ ಅವರು ,
ಇತರರ ಜೀವನ ರಂಜನೆಯ ಸಿನಿಮಾ
ಎಂದುಕೊಂಡಿರುವರೆನೋ..
ಬಲ್ಲವರಾರು…?!

ನನ್ನ ವಾಚಾಳಿತನಕ್ಕೆ
ಬೆರಗಾಗುವ ಅವರು,
ತಾರತಮ್ಯದ ಪಟ್ಟವನ್ನು
ಕಟ್ಟುವರೇನೋ …ಬಲ್ಲವರಾರು?!

ಒತ್ತಡಗಳನ್ನು ಮೆಟ್ಟಿ ನಿಂತು
ಚಿಟ್ಟೆಯಂತೆ ಹಗುರಾಗಿ
ಹಾರಾಡುವಾಗ , ಹತೋಟಿಯ
ವ್ಯರ್ಥ ಪ್ರಯತ್ನ ಮಾಡುವರೆನೊ…
ಬಲ್ಲವರಾರು…?!


-ವೀಣಾ ಶ್ರೀನಿವಾಸ್, ಮಧುಗಿರಿ
—–