ಭಾವನೆ
ಮನದಿ ಮೂಡಿದ ಮಾತು
ಮೊಗದಿ ಕಾಣುವ ಒನಪು
ನೋವು ನಲಿವಿನ ಛಾಪು
ಸಂಭ್ರಮ,ಸಂತಸದ ಹುರುಪು|
ಅಂತರಾಳವ ಕದಡಿ
ಜೀವವನೇ ಹಿಂಡಿ
ತೊಳಲಾಡುವಂತೆ ಮಾಡಿ
ಹಿಂಸೆಕೊಟ್ಟು ಒಡನಾಡಿ||
ಕೆಲವೊಮ್ಮೆ ಅರಳಿ
ಹಲವೊಮ್ಮೆ ಕೆರಳಿ
ಇನ್ನೊಮ್ಮೆ ಹೊರಳಿ
ಮತ್ತೊಮ್ಮೆ ಮರಳಿ|
ಮನುಜನ ಏಳು ಬೀಳಿಗೆ
ಕೀರ್ತೀ,ಯಶಸ್ಸಿಗೆ
ಒಲವು-ಗೆಲುವಿಗೆ
ಕಾರಣವೇ ಈ ಭಾವನೆಗಳು||
-ಧರಣೀಪ್ರಿಯೆ, ದಾವಣಗೆರೆ
—–