ಶ್ರೀ ಕನಕದಾಸರ ಚಿಂತನೆಗಳು ಸದಾ‌ ಪ್ರಸ್ತುತವಾಗಿವೆ: ಶಾಸಕ ಸೋಮಶೇಖರ್ ರೆಡ್ಡಿ ಬಳ್ಳಾರಿಯಲ್ಲಿ ಸಂತ, ಕವಿ ಶ್ರೇಷ್ಠರ ಜಯಂತಿ ಆಚರಣೆ

  1. ಬಳ್ಳಾರಿ: ನಿಸ್ವಾರ್ಥದಿಂದ ಪರರ ಏಳ್ಗೆಗೆಗೆ ಶ್ರಮಿಸುವ ಸಮುದಾಯ ಕುರುಬ ಸಮುದಾಯ. ನನ್ನ ಉಸಿರು ಇರುವವರೆಗೆ ನಾನು ಈ ಸಮುದಾಯಕ್ಕೆ ಚಿರ ಋಣಿಯಾಗಿರುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಭಾವುಕರಾಗಿ ಹೇಳಿದರು.
    ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತಶ್ರೇಷ್ಠ ಕವಿ ಭಕ್ತಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಸೂರ್ಯಚಂದ್ರ ಇರುವವರೆಗೆ ಸಂತಶ್ರೇಷ್ಠ ಕನಕದಾಸರ ಚಿಂತನೆಗಳು ಚಿರಸ್ಥಾಯಿಯಾಗಿರುತ್ತವೆ. ಕುರುಬರ ಸಂಘದ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಈಗಾಗಲೇ 50ಲಕ್ಷ ರೂ.ನೀಡಿದ್ದು, ಹೆಚ್ಚುವರಿಯಾಗಿ 50ಲಕ್ಷ ರೂ.ಅಗತ್ಯವಿದ್ದರೇ ಅದನ್ನು ನೀಡಲಾಗುವುದು ಎಂದರು.
    ಕುರುಬ ಸಮುದಾಯಕ್ಕೆ ಏನೇ ಕಷ್ಟಗಳು ಬಂದ್ರೂ ತಮ್ಮಲ್ಲಿ ಒಬ್ಬರಾಗಿ ನಾನು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ ಎಂದರು.
    ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಅವರು ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ದನಿಎತ್ತಿದ ಮಹಾನ್ ವ್ಯಕ್ತಿ. ಈ ಮಹಾನ್ ಸಂತ ಶ್ರೇಷ್ಠರ ಆಚಾರ ವಿಚಾರಗಳು ಜಾತಿಯೊಂದಕ್ಕೆ ಸೀಮಿತವಾಗದೇ ನಮ್ಮ ಬದುಕಿನ‌ ಭಾಗವಾಗಬೇಕು ಎಂದರು.
    ಕುರುಬರ ಸಂಘದ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗಾಗಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಸಚಿವ ಶ್ರೀರಾಮುಲು
    ಅವರು ತಮ್ಮ ಶಾಸಕರ ಅನುದಾನದಲ್ಲಿ ತಲಾ 50ಲಕ್ಷ ರೂ.ಅನುದಾನ ಒದಗಿಸಿದ್ದಾರೆ.
    ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಸ್ನೇಹಮಯಿ ಮತ್ತು ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ವ್ಯಕ್ತಿಯಾಗಿದ್ದಾರೆ ಎಂದರು.
    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ‌ ಅವರು 50ಲಕ್ಷ ರೂ. ಮತ್ತು ಶಾಸಕ‌ ನಾಗೇಂದ್ರ ಅವರು 10ಲಕ್ಷ ರೂ.ನೀಡಲು‌ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
    ಜಿಲ್ಲಾಧಿಕಾರಿ ಎಸ್‌.ಎಸ್.ನಕುಲ್ ಅವರು ಮಾತನಾಡಿ, ಕನಕದಾಸರ ತತ್ವ ಆದರ್ಶಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
    ಬುಡಾ ಅಧ್ಯಕ್ಷ ದಮ್ಮೂರು ಶೇಖರ ಅವರು ಮಾತನಾಡಿದರು.
    ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ತರಸಾಲಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು.
    ದೊಡ್ಡಬಸವ ಗವಾಯಿಗಳು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.
    ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಶರಣಯ್ಯ ಒಡೆಯರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಮತ್ತಿತರರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಮುದಾಯದ ಪ್ರಮುಖರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
    ಇದಕ್ಕೂ‌ ಮುಂಚೆ ಅಗ್ನಿಶಾಮಕ ದಳದ ಕಚೇರಿ ಮುಂಭಾಗದಲ್ಲಿರುವ ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಲಾಯಿತು. ಅಲ್ಲಿಂದ ಆರಂಭವಾದ ಮೆರವಣಿಗೆಯು ಬಿಡಿಎಎ ಫುಟ್ಬಾಲ್ ಮೈದಾನದವರೆಗೆ ನಡೆಯಿತು.