ಎದುರಿಗೆ ನಿಂತ
ಅವಳೆದೆಯ ಎಷ್ಟೋ
ಮಾತುಗಳನ್ನು
ಕಂಗಳಲ್ಲಿಯೇ
ಓದಿಕೊಂಡೆ
ಕಡು ಬಣ್ಣದ
ಗುಲಾಬಿಯನ್ನಿತ್ತು
ನೀ ನನ್ನ ಬಣ್ಣವೇನೇ
ಎಂದಷ್ಟೇ ಕದಲಿದಳು
ಕೈಗಿತ್ತ ಗುಲಾಬಿ
ಅವಳ ಮುಡಿಯಲ್ಲಿಟ್ಟೆ
ಚೆಲುವಿಗೊಂದು
ಹೆಸರಾಯಿತು
ನಿಂತು ಸುಮ್ಮನೆ
ಎದೆಗೆ ಒರಗಿ ನಿಂತಳು
ನಾನು ಆತುಕೊಂಡೆ
ಕನಸುಗಳು ಆಗಷ್ಟೇ
ಹಿಮ್ಮಡಿಯಾದವು
ಜಗದ ನಿಯಮಗಳಿಗೆ
ನಮ್ಮದೊಂದು
ನಿಯಮ ಸೇರ್ಪಡೆಯಾಯಿತು
ಮುಂದಿನದು ಏನಿದೆ
ನಾವು ಪ್ರೇಮಿಗಳಷ್ಟೇ
ಉಸಿರು ನಿಲ್ಲುವವರೆಗೂ
-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–