ಇಂದು ತೆಕ್ಕಲಕೋಟೆಗೆ ನ್ಯೂಸ್ ಯ್ಯಾಂಕರ್ ನವಿತಾ ಜೈನ್

ಸಿರುಗುಪ್ಪ, ಫೆ. 13: ತಾಲೂಕಿನ ತೆಕ್ಕಲಕೋಟೆಯ ಶ್ರೀಮತಿ ಹೊನ್ನೂರಮ್ಮ ಮತ್ತು ದಿ. ಎಂ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಫೆ.13ರಂದು ಮಂಗಳವಾರ ಆಯೋಜಿಸಿರುವ ಯುವ ಸ್ಫೂರ್ತಿ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯೂಸ್ ಯ್ಯಾಂಕರ್ ನವಿತಾ ಜೈನ್ ಅವರು ಆಗಮಿಸುವರು.
ಬೆ.11 ಗಂಟೆಗೆ ವಿಎಸ್ ಕೆ ವಿವಿ ಕುಲಪತಿ ಡಾ. ಅನಂತ್ ಎಲ್ ಝಂಡೇಕರ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಮೋಕ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.


ಮುಖ್ಯ ಅತಿಥಿಗಳಾಗಿ ಸಿರುಗಪ್ಪ ಶಾಸಕ ಬಿ ಎಂ ನಾಗರಾಜ್, ಕಾಲೇಜಿನ ಭೂದಾನಿ, ಮಾಜಿ ಶಾಸಕ ಎಂ. ಎಸ್ ಸೋಮಲಿಂಗಪ್ಪ, ಐಕ್ಯೂಎಸಿ ಸಂಯೋಜಕ ಡಾ. ಬಿ ವಿ ವೀರೇಶ್, ಕರ್ನಾಟಕ ರಾಜ್ಯ ಸರಕಾರಿ ಪ್ರಥಮ‌ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ. ಟಿ.ದುರುಗಪ್ಪ, ಕಾರ್ಯನಿರತ  ಪತ್ರಕರ್ತರ ಸಂಘದ ಮುಖಂಡ ಆರ್. ಬಸವರೆಡ್ಡಿ,  ಪ್ರಜಾವಾಣಿ ತೆಕ್ಕಲಕೋಟೆ ವರದಿಗಾರ ಚಾಂದ್ ಭಾಷ ಅವರು ಉಪಸ್ಥಿತರಿರುವರು.
ಆಂಗ್ಲ ವಿಭಾಗದ ಮುಖ್ಯಸ್ಥೆ ಎಸ್.ವಿ ವರಲಕ್ಷ್ಮಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೈ. ಜನಾರ್ದನ ರೆಡ್ಡಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಸವರಾಜ್ ಎ ಎಸ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರವೀಂದ್ರ ತೆಳಗಡೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ತೇಜಸ್ವಿನಿ, ಉಪನ್ಯಾಸಕರಾದ ಡಿ. ಕುಮಾರಸ್ವಾಮಿ, ಡಾ. ಜಯಣ್ಣ, ಡಾ. ಶಿವಣ್ಣ, ಹೆಚ್. ವೀರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು.