ಅನುದಿನ ಕವನ-೧೧೩೯, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಪ್ರೀತಿಯೆಂದರೆ….

“ಕರ್ನಾಟಕ ಕಹಳೆ ಡಾಟ್ ಕಾಮ್ ಅನುದಿನ ಕವನ ಕಾಲಂನ ಸಮಸ್ತ ಸಹೃದಯಿಗಳಿಗೂ, ಸಕಲ ಪ್ರೀತಿ-ಪಾತ್ರರಿಗೂ, ಪ್ರಪಂಚದೆಲ್ಲ ಪ್ರೇಮಿಗಳಿಗೂ ’ಪ್ರೇಮಿಗಳ ದಿನಾಚರಣೆ’ ಯ ಮುಂಗಡ ಶುಭಾಶಯಗಳು. “Happy valentine’s day” to One and All.            ಒಲವಿನ ಮಧುರ ರಿಂಗಣಗಳ ಕವಿತೆಯಿದು. ಪ್ರೇಮದದಿನಕೆ ಮುಂಗಡ ಬೆಳಗಿದ ಅಕ್ಷರದ ಅಕ್ಕರೆಹಣತೆಯಿದು. ಅನುರಾಗದ ಕಿರಣಗಳ ಆರಾಧನೆಯ ಭಾವಪ್ರಣತೆಯಿದು. ಒಪ್ಪಿಸಿಕೊಳ್ಳಿ”

-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಪ್ರೀತಿಯೆಂದರೆ…

ಪ್ರೀತಿಯೆಂದರೆ..
ಹೃದಯ ಮಂದಿರಕೆ
ಹೆದ್ದಾರಿ!

ಪ್ರೀತಿಯೆಂದರೆ..
ಹೃದಯ ದೈವವ
ಸತತ ಆರಾಧಿಸುವ
ಜವಾಬ್ದಾರಿ!

ಪ್ರೀತಿಯೆಂದರೆ..
ಹೃದಯ ನುಡಿಸುವ
ಮಾಯಾ-ಕಿಂದರಿ!

ಪ್ರೀತಿಯೆಂದರೆ..
ಹೃದಯ ಹಸಿರಾಗಿಸುವ
ಭಾವ-ಝರಿ!

ಪ್ರೀತಿಯೆಂದರೆ..
ಅಕ್ಷರಗಳಿಗೆ ನಿಲುಕದ
ಅನನ್ಯ ಸುಂದರಿ!
ಅಪೂರ್ವ ಕಿನ್ನರಿ!!

ಪ್ರೀತಿಯೆಂದರೆ..
ಮನಗಳ ಬೆಸೆವ-ಶಕ್ತಿ!
ಜಗದಂಗಳವ ಬೆಳಗಿಹ
ದಿವ್ಯ-ದೀಪ್ತಿ!!

-ಎ.ಎನ್.ರಮೇಶ್. ಗುಬ್ಬಿ.