ಅನುದಿನ ಕವನ-೧೧೪೧, ಕವಿ: ಸಿದ್ದು ಜನ್ನೂರು, ಚಾಮರಾಜ‌ ನಗರ, ಕವನದ ಶೀರ್ಷಿಕೆ: ಮನ್ವಂತರ ಬುದ್ಧ…

ಮನ್ವಂತರ ಬುದ್ಧ

ಶುದ್ದ
ನನ್ನೆದೆ ಬುದ್ಧ
ಬುದ್ಧ
ಎಲ್ಲವ ಗೆದ್ದ
ನೀಲಾಕಾಶವೆ ಹೊಸತು ಮನ್ವಂತರ
ಲುಂಬಿನಿ ಬನದಿ ಅರಳಿ ಹೂ ಔದುಂಬರ
ನಿನಗೆ ಸ್ವಾಗತ ಹೇಳಿದ ಹುಣ್ಣೆಮೆ ಚಂದಿರ…

ಹುಟ್ಟು ಜ್ಞಾನ ಸಾವುನೂ ಎಲ್ಲ
ಶಾಶ್ವತವಾಗಿ ನಿಂಗೆ ಶರಣಾದವಲ್ಲ
ಹುಣ್ಣೆಮೆ ದಿನವೆ ಎಲ್ಲ
ಜಗಕ್ಕೆಲ್ಲ ಬೆಳಕಿನ ಮಳೆಗರೆಯಿತಲ್ಲ
ನಿನೊಬ್ಬನೆನೆ ನಮ್ಮ ಪಾಲಿನ ಬೆಳಕು
ಬದುಕೆಂದು ನಿನ್ನಿಂದ ಮಾಯಾನಂದನ
ಇನ್ನೂ ನಮಗಿಲ್ಲ ಮೌಡ್ಯದ ಬಾಹುಬಂಧನ…

ಮೇಲುಕೀಳು ಶೋಷಣೆಯ ಗೀಳು
ಸುಳಿಯದಂಗೆ ನೀನು ಬೇಲಿಯಾದೆ
ಜಾತಿ ಭೀತಿ ಮನುಸೃತಿ
ಎಲ್ಲ ಛಿದ್ರಗೊಳಿಸಿ ಶಾಶ್ವತ ನೀನಾದೆ
ಸಮಾನತೆಯೊಂದೆ ನಿನ್ನ ಧಮ್ಮ ಸಂಸ್ಕೃತಿ
ಮಾನವರೆಲ್ಲ ಒಂದೆ ಎಂಬುದೇ ನಿನ್ನ ನೀತಿ
ತೋರಿದೆ ಸನ್ಮಾರ್ಗದ ಶೋಧನೆಯ ಹೊಸತು ದಾರಿ…


-ಸಿದ್ದು ಜನ್ನೂರು, ಚಾಮರಾಜ ನಗರ
—–