ಅಳವಂಡಿ ಫೆ,15: ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಮೂಡ ನಂಬಿಕೆಗಳಿಗೆ ಬಲಿಯಾಗಬಾರದು ಎಂದು ಜನರಲ್ಲಿ ಜಾಗೃತಿಯನ್ನು ಮೂಡಿಸಿದವರು ಶ್ರೀ ಸಂತ ಸೇವಾಲಾಲರು ಎಂದು ಪ್ರಾಚಾರ್ಯ ಡಾ. ಗವಿಸಿದ್ದಪ್ಪ ಮುತ್ತಾಳ್ ಅವರು ಹೇಳಿದರು. ಇಲ್ಲಿನ ಶ್ರೀ ಶಿವಮೂರ್ತಿ ಸ್ವಾಮಿ ಇನಾಮದಾರ್ ಕಟ್ಟಿಮನಿ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿಯಲ್ಲಿ ಏರ್ಪಡಿಸಲಾಗಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಂಜಾರ ಸಮುದಾಯಕ್ಕೆ ಸೇವಾಲಾಲ್ ಅವರ ಕೊಡುಗೆ ಅಪಾರ, ಅಲ್ಲದೇ ಆಗಿನ ಬ್ರಿಟಿಷರಿಂದ ಎದುರಾದ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಸಾವಿರಾರು ಗೋವುಗಳೊಂದಿಗೆ ಸಂಚಾರ ಮಾಡುತ್ತಾ ಇಡೀ ದೇಶವನ್ನೇ ಸುತ್ತಿದವರು, ಸಕಲ ಜೀವಜಂತುಗಳಿಗೂ ಒಳಿತನ್ನೇ ಬಯಸಬೇಕು ಎನ್ನುವ ವಿಶ್ವಮಾನವತೆಯನ್ನು ಸಾರಿದವರು ಶ್ರೀ ಸೇವಾಲಾಲ್ ರವರು. ಈಗಿನ ಪೀಳಿಗೆ ಸೇವಾಲಾಲರ ಆದರ್ಶಗಳನ್ನು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಜಗದೀಶ್, ಉಪನ್ಯಾಸಕರಾದ ವಿನಾಯಕ್ ನಾಯ್ಕ್ , ವಿಜಯ್ ಕುಮಾರ್ ಕುಲಕರ್ಣಿ, ರಾಘವೇಂದ್ರ, ಇಬ್ರಾಹಿಂ ಸಾಬ್ ನದಾಫ್, ಅನಿಲ್, ದೇವರಾಜ್, ಹನುಮೇಶ್ , ಸಿದ್ದಪ್ಪ, ಕೃಷ್ಣ, ಹಗಲೂರಪ್ಪ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.