ಅಳವಂಡಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ: ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ -ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ

ಅಳವಂಡಿ: ಗ್ರಾಮೀಣ ಭಾಗದಲ್ಲಿನ ಕಾಲೇಜು ಬಿಟ್ಟು ನಗರ ಭಾಗದಲ್ಲಿನ ಕಾಲೇಜಿಗೆ ಹೋಗುವ ಅವಶ್ಯಕತೆ ಇಲ್ಲ. ನಗರದಲ್ಲಿರುವ ಕಾಲೇಜುಗಳಲ್ಲಿನ ಸೌಲಭ್ಯಗಳೆಲ್ಲ ಗ್ರಾಮೀಣ ಕಾಲೇಜುಗಳಲ್ಲಿ ದೊರೆಯುತ್ತಿದೆ ಎಂದು ಚಿಂತಕರಾದ ಅಲ್ಲಮಪ್ರಭು ಬೆಟ್ಟದೂರ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಶಿವಮೂರ್ತಿ ಸ್ವಾಮಿ ಇನಾಮದಾರ್  ಕಟ್ಟಿಮನಿ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿಯಲ್ಲಿ ಏರ್ಪಡಿಸಲಾಗಿದ್ದ ಐ.ಕ್ಯೂ.ಎ.ಸಿ ಮತ್ತು ವಿವಿಧ ಘಟಕಗಳ ಉದ್ಘಾಟನೆ ಹಾಗೂ ಬಿ. ಎ /ಬಿ. ಕಾಂ ಪ್ರಥಮ  ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲು ಕನಸನ್ನು ಕಾಣಬೇಕು ಆ ಕನಸನ್ನು ನನಸು ಮಾಡಬೇಕಾದರೆ ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಮ್ಮ ಪರಂಪರೆಯನ್ನು ಆಚರಿಸುತ್ತಾ, ನಮ್ಮ ಮೂಲವನ್ನು ಬಿಡದೆ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು.  ಅಲ್ಲದೆ ಹೆಚ್ಚು ಉದ್ಯೋಗ  ಸೃಷ್ಟಿಸುವ ಕ್ಷೇತ್ರ ವೆಂದರೆ ಅದು ಕೃಷಿ ಅದನ್ನು ಮರೆಯದೆ  ಹೆಚ್ಚಿನ ಆಸಕ್ತಿಯನ್ನು ಕೃಷಿಕಡೆ ತೋಡಗಿಸಿಕೊಳ್ಳಬೇಕು ಎಂದರು.
ವಕೀಲರಾದ ಬಾಳಪ್ಪ ವೀರಾಪುರ ರವರು ಮಾತನಾಡಿ, ಇಂದು ಗ್ರಾಮೀಣಾ ಭಾಗದಲೂ ಶಿಕ್ಷಣ ಕಲಿಯಲು ಎಲ್ಲಾ ವ್ಯವಸ್ಥೆ ಇದೆ. ಅದರ ಪ್ರಯೋಜನ ಪ್ರತಿಯೊಬ್ಬರೂ ಪಡೆಡುಕೊಂಡು ಉನ್ನತ ಮಟ್ಟಕ್ಕೆ ಬೆಳೆದು ಗ್ರಾಮಕ್ಕೆ ಉತ್ತಮ ಹೆಸರು ತರಬೇಕು ಅಲ್ಲದೆ ಎಂತಹ ಕಷ್ಟದ ಸಮಯದಲ್ಲೂ ಶಿಕ್ಷಣವನ್ನು ಮಾತ್ರ ಬಿಡಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗವಿಸಿದ್ದಪ್ಪ ಮುತ್ತಾಳ್ ರವರು ಮಾತನಾಡಿ, ವಿದ್ಯಾರ್ಥಿಯ ದೆಸೆಯಲ್ಲಿಯೇ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವ ಕಡೆ ಶ್ರಮಿಸಬೇಕು ಎಂದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯ್ಯಾರಿ ನಡೆಸಿ ಉತ್ತಮ ಉದ್ಯೋಗ ಪಡೆದು ಕಾಲೇಜಿಗೆ ಕೀರ್ತಿಯನ್ನು ತರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಗುರುರಾಜ್ ಹಳ್ಳಿಕೇರಿ , ರಂಗಪ್ಪ ಕರಡಿ ಹಾಗೂ ಉಪನ್ಯಾಸಕರಾದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಜಗದೀಶ್,ಇಂಗ್ಲೀಷ್ ವಿಭಾಗ ಮುಖ್ಯಸ್ಥರಾದ ಪ್ರೋ. ಮಲ್ಲಿಕಾರ್ಜುನ್ ,  ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ. ಇಮಾಮ್ ಸಾಬ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಂದ್ರಪ್ಪ, ಪ್ರದೀಪ್ ಪಲ್ಲೇದ್ , ವೆಂಕಟೇಶ್ , ವಿಜಯ್ ಕುಮಾರ್ ಕುಲಕರ್ಣಿ, ಇಬ್ರಾಹಿಂ ಸಾಬ್ ನದಾಫ್, ಅನಿಲ್,  ವಿನಾಯಕ್ ನಾಯ್ಕ್, ವೀರಯ್ಯ ಮಠದ್, ರಹಿಮಾನ್ ಸಾಬ್ , ರಾಘವೇಂದ್ರ , ಹನುಮೇಶ್ , ಸಿದ್ದಪ್ಪ, ಕೃಷ್ಣ, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
—–