ಅನುದಿನ ಕವನ-೧೧೫೭, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಅರೆ ಬರೆ ಸಾಲುಗಳು

ಅರೆ ಬರೆ ಸಾಲುಗಳು

ತನ್ನ ಬೆಡಗು  ಬಿನ್ನಾಣ
ಬಿಂಕಕ್ಕೆ
ತಾನೇ ಮರುಳಾಗಿರುವಳು
ಬಟ್ಟೆಯಂಗಡಿ ಎದುರಿನ
ಮೇನ್ ಕಿನ್ ಚೆಲುವೆ.

ತನ್ನ ಪದಗಳ ಡೊಂಕಿಗೆ ತಾನೇ
ಬೆರಗಾಗುವುದು ಕವಿತೆ.

ಗಾಢ ನಿದ್ದೆಯೊಳೂ
ಹಸಿದ ಕಣ್ಣೊಂದು ಹಿಂಬಾಲಿಸುತಿದೆ
ದೀನ ನ ಮನೆಯ ದೀಪ
ಅವನ ಕಂಬನಿಯ ಬಸಿದೆ ಉರಿಯುತಿದೆ.

ಕರಿ ಮಸಿಯ ಮೊಹರು
ತಪ್ಪಿಸಿಕೊಂಡ ಲಕೋಟೆಯೊಳಗೆ
ಚಡಪಡಿಸುವ ಅಕ್ಷರಗಳು.

ದಾರಿ ಹೋಕನ
ಆರ್ತ ಹಾಡಿನ ಎದೆಯ ಕಿಡಿಗೆ ಕಂಪಿಸಿ
ಹೊತ್ತಿ ಉರಿದಿವೆ ಸಂತೆ ಪೇಟೆಯ
ದೀಪಗಳು.


-ಎಲ್ವಿ, ಬೆಂಗಳೂರು
—–