ಬಿಸಿಲ ಬೇಗೆ
ಇಟ್ಟಿದ್ದೇವೆ
ಬಿಸಿಲ ಬೇಗೆಯಲಿ
ಹೆಜ್ಜೆಯನು..
ಬಿಸಿಲನ್ನೇ ಎದ್ದು ಹೊದ್ದು
ಬೆಳೆದವರು ನಾವು…
ಅದರೆ…
ಹಿಂದೆ ಸುಟ್ಟಿರುವ
ಜಾತಿ, ಮತಾಂಧತೆಯ
ಹೆಣದ ಬೂದಿಯೇ
ಇನ್ನೂ ಆರಿಲ್ಲ.
ಅದರ ಕಮಟುವಾಸನೇಯಲ್ಲಿಯೇ
ಬದುಕು ಸೆವಿಸುತ್ತಿದ್ದೇವೆ…
ಮನುಷ್ಯನ ಮನಸ್ಸು
ಮತ್ತು ನೆಲವು ಕೆಂಡದಂತೆ
ಓಡಾಡುತ್ತಿದೆ.
ನೆಲಮುಗಿಲ ಆಕ್ರೋಶಕೆ
ಸಮಾಜವು ತಲ್ಲಣಿಸಿ,
ಬಡತನದ ಕಿಚ್ಚುನೆಬ್ಬಿಸಿ
ಕನಸು ಕಾಣದ ಭ್ರಮರಕ್ಕೂ ಸಗಣಿ ನೀರೆರಚಿದೆ.
ಅದೆಷ್ಟೋ ಕೂಸುಗಳು
ಹೊಟ್ಟೆಯ ಆಚೆ ಬರಲು ಅಂಜುತ್ತಿವೆ…
ಈ ಲೋಕದ ಸುತ್ತಲೂ
ನಡೆಯುವ ರಣರಂಗದ
ಆಟದಲಿ ಯಾರ ಪರ
ನಿಂತರು ಅದು
ಹೆಣರಂಗದ ಆಟವೇ
ಆಗಿದೆ.
ಜಾತಿ, ಮತಾಂಧತೆಯ
ಪೊರೆಕಳಚಿ
ಬರಬೇಕಾಗಿದೆ ನಾವು
ಕಟ್ಟಬೇಕಾಗಿದೆ
ನಾಡನ್ನು, ದೇಶವನು…..
-ಡಾ.ಗುರುಪ್ರಸಾದ ರಾವ್ ಹವಾಲ್ದಾರ್, ಮರಿಯಮ್ಮನಹಳ್ಳಿ