ಅನುದಿನ‌ ಕವನ-೧೧೭೧, ಹಿರಿಯ ಕವಿ: ಸುಧೀಂದ್ರ ನಾರಾಯಣ ಜೋಯಿಸ್, ಶಿವಮೊಗ್ಗ

ನಾನು ಎಷ್ಟೇ ಕವಿತೆ ಬರೆದರೂ
ನೀವ್ಯಾರೂ ಓದುವುದಿಲ್ಲ.
ನನಗೆ ಗೊತ್ತಿಲ್ಲ
ನಿಮಗಿಷ್ಟದಂತೆ ಬರೆಯುವ ಕವಿತೆ.
ವಿಚಿತ್ರ…
ಗೊತ್ತಿದೆ ಬರೆಯುವುದು ಮಾತ್ರ.

ನಿಮಗೆ ಕವಿತೆಗಳ ಬಗ್ಗೆ
ಅಸಡ್ಡೆಯೆ?
ಹಾಗೆಂದುಕೊಂಡರೆ
ಅಂಡರೆಸ್ಟಿಮೇಟು.
ಹೋಗಲಿ
ನೀವು ಅರಸಿಕರೆ?
ಅದೂ ಅಲ್ಲ.
ನೀವು ಮೆಚ್ಚಿದ ಕವಿತೆಗಳನ್ನ ನಾನೋದಿರುವೆ.
ಸ್ಟನ್ನಾಗಿರುವೆ.

ಅಂಥದೇ ಬರೆದರೆ
ನೀವು ಚರ್ವಿತಚರ್ವಣ ಅನ್ನುವುದೂ ಇಲ್ಲ.
ನನ್ನಲ್ಲಿ ಆ ರೀತಿ ಕವಿತೆ
ಹುಟ್ಟುವುದೇ ಇಲ್ಲ.

ಸ್ವಾಮೀ ಕವಿತೆಯ ವಿಮರ್ಶಕರೆ
ನೀವು ಓದುವುದೇ ಬೇಡ.
ನನ್ನಂತೆ ಓದುವವರಿದ್ದಾರೆ.
ನೀವು ಓದಿದರೆ,
ಓದದೇ ಇದ್ದರೆ
ಶರಣು.


-ಸುಧೀಂದ್ರ ನಾರಾಯಣ ಜೋಯ್ಸ್, ಶಿವಮೊಗ್ಗ
—–