ಅನುದಿನ ಕವನ-೧೧೭೩, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಒಂದು ಹಗಲು

ಒಂದು ಹಗಲು

ಬೆಳ್ಳಿ ಚುಕ್ಕಿ
ಮೂಡಿದರೆ ಸಾಕು
ಮುದಗೊಳ್ಳುವುದು
ನವ ಚೈತನ್ಯ ತುಂಬಿ
ಆಕಾಶ ಭೂಮಿ

ತಂಗಾಳಿ ಬೀಸಿ
ಹೊಂಬಿಸಿಲು
ಕಂಗೊಳಿಸುವುದು
ನಡೆದಷ್ಟು ದುಡಿದಷ್ಟು
ಬಾರದು ಬೇಸರಿಕೆ

ನಡು ಹೊತ್ತು ಘನ ಗಾಂಭೀರ್ಯ
ಪ್ರಕಾಶಮಾನ ಸುಡು ಬಿಸಿಲು
ಸಂಜೆಗೆ ಸೂರ್ಯನೇ ಕೆಂಪು
ಸುತ್ತೆಲ್ಲ ಚಿತ್ತಾರ
ಎಲ್ಲರ ಚಿತ್ತ ತಂಪು ಕೆಂಪು

ನೀನು ನಾನು ಒಂದೇ
ಒಂದು ಹಗಲು
ಸೂರ್ಯೋದಯದಿಂದ
ಸೂರ್ಯಾಸ್ತದವರೆಗೆ

-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ.
——