ಅನುದಿನ ಕವನ-೧೧೮೪, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ‌ಹಡಗಲಿ ಕವನದ ಶೀರ್ಷಿಕೆ:ಜಾಣಮಲ್ಲ

ಜಾಣಮಲ್ಲ

ಯುಗಕೊಂದು ಯುಗಾದಿ                             ಹಾಕುವುದು ಬುನಾದಿ                                    ನಂತರದ ಹಬ್ಬದಾಚರಣೆ                                  ಔಪಚಾರಿಕ ಮಾತ್ರ

ಕೃತಯುಗವದು ಸತ್ಯದಕಾಲ
ತ್ರೇತಾಯುಗದಿ ರಾಮರಾಜ್ಯ
ದ್ವಾಪರದಲ್ಲಿ ದಾಯಾದಿ ಕಲಹ
ಕಲಿಯುಗ ಈಗ
ಸುಳ್ಳಿನ ಸಾಮ್ರಾಜ್ಯ
ಕಳ್ಳರ ನಾಯಕತ್ವ

ಪ್ರತಿಯುಗದಲ್ಲೂ
ಮೋಸ ವಂಚನೆ ತಟವಟ
ರಾಜರ ದರ್ಬಾರು ಬಡವರ ಕಣ್ಣೀರು

ಕಾಲ ಕಾಲಕ್ಕೆ ಬದಲಾಗುತ ಪ್ರಕೃತಿ
ತಿಳಿಸುವುದು ನಿಜ ನೀತಿ
ಪುರುಷ ಅಟ್ಟಹಾಸದಿ ಮೆರೆದು
ತನಗೆ ತಾನೆ ತಂದು ಕೊಳ್ಳುವನು ಅವನತಿ

ಸಂಕ್ರಾಂತಿ ಗೆ ಎಳ್ಳು ಬೆಲ್ಲ
ಯುಗಾದಿಗೆ ಬೇವು ಬೆಲ್ಲ
ದಸರೆಗೆ ಭಾವೈಕ್ಯದ ಬೆಲ್ಲ
ದೀಪಾವಳಿ ಗೆ ಹೋಳಿಗೆ ಬೆಲ್ಲ
ನಿಜರುಚಿಯ ಉಂಡವನು ಜಾಣ ಮಲ್ಲ
ನೂರ್ಕಾಲ ಬಾಳುವನಲ್ಲ

-ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ                  —–