ಹೂವಿನ ಹಡಗಲಿ: ಶೋಭಾ ಪ್ರಕಾಶನದ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿ ಬಿಡುಗಡೆ

ಹೂವಿನ ಹಡಗಲಿ, ಮಾ.29: ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನಗರದ ಎಸ್ ಆರ್ ಎಂ ಪಿ ಪಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ವರುಷದ ಹರುಷ’ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಿತ್ರು.
ಶೋಭಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ  ಶೋಭಾ ಮಲ್ಕಿಒಡೆಯರ್ ಅವರ ಕಥೆ ಕಾವ್ಯಗಳ ಗುಚ್ಚ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿಯನ್ನು ವೈದ್ಯಾಧಿಕಾರಿ ಡಾ. ಕೊಟ್ರಮ್ಮ ಲೋಕಾರ್ಪಣೆ ಗೊಳಿಸಿದರು. ಯುವ ಸಾಹಿತಿ ಕಾರ್ತಿಕ್ ಆಚಾರ್ಯ ಅವರು ಕೃತಿ ಪರಿಚಯಿಸಿದರು.
ಕರ್ನಾಟಕ ಸರಕಾರಿ ನೌಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ ಪಿ ಎಂ ಅಶೋಕ ಅವರು ಕಾರ್ಯಕ್ರಮ ಉದ್ಘಾಟಿಸಿದರು.                                     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ ಎಂ ದೊಡ್ಡ ಬಸಯ್ಯ ಮಾತನಾಡಿ, ತಮ್ಮ ಸಂಸ್ಥೆ ಮತ್ತಷ್ಟು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತಿಳಿಸಿದರು.                                            ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ. ಕಚೇರಿ ವ್ಯವಸ್ಥಾಪಕಿ ಶ್ರೀಮತಿ ಎಸ್ ಜ್ಯೋತಿ ಉಪಸ್ಥಿತರಿದ್ದರು.

ಶ್ರೀಮತಿ ವೀಣಾ ಹೆಚ್ ಪಾಟೀಲ್ ಅವರು ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಹಾಸ್ಯ ಭಾಷಣಕಾರ ಬಿ ಬಿ ಬೆನಕನವಾರಿ ಅವರ ಉಪನ್ಯಾಸ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿತು.
ಅಧ್ಯಕ್ಷ ದೊಡ್ಡಬಸಯ್ಯ ಬಿ ಎಂ ಅವರು ಮಾತನಾಡಿ
ಕವಿಗೋಷ್ಠಿ: ಚನ್ನವೀರ ಸ್ವಾಮಿ, ಶ್ರೀಮತಿ ಹೆಚ್ವನಾಗರತ್ನ, ಶ್ರೀಮತಿ ಜೆ ಬಿ ನೂರ ಜಹಾನ್, ಶ್ರೀಮತಿ ಯು ರೇಣುಕಾ, ವೀರಭದ್ರಯ್ಯ ಟಿ ಎಂ , ಶ್ರೀಮತಿ ರಿಹಾನ್ ಕಲಾರಿ, ಶ್ರೀಮತಿ ನಾಗರತ್ನ ನಾಗಭೂಷಣ್, ಕೊಟ್ರೇಶ್ ಜವಳಿ, ಶ್ರೀ ಕಳಕಪ್ಪ ಜಲ್ಲಿಗೇರಿ, ಗಂಗಾಧರ ಹುಣಶಿಕಟ್ಟಿ, ಜಿ ಆರ್ ಬಸವ ರಾಜೇಶ್ವರಿ, ವೀರೇಶ್ ಎಸ್ ಕವಿತೆಗಳನ್ನು ವಾಚಿಸಿದರು.


ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಪ್ರಕಾಶ್ ಮಲ್ಕಿ ಒಡೆಯರ್ ಮತ್ತಿತರರು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ್ ಎಸ್ ಹೆಚ್ ಟ್ರಸ್ಟ್ ನಡೆದು ಬಂದ ದಾರಿ ಕುರಿತು ವಿವರಿಸಿದರು.
ಗೌರಮ್ಮ ಮಲ್ಲಿನಾಥ ಸ್ವಾಗತಿಸಿದರು. ನಳಿನಾಕ್ಷಿ ಮಲ್ಲಿನಾಥ ವಂದಿಸಿದರು. ಹಾಲೇಶ ಹಕ್ಕಂಡಿ ಹಾಗೂ ನಿಸಾರ್ ಸಾಲಿನ ನಿರ್ವಹಿಸಿದರು
——-