ಮನುಷ್ಯ ಉದ್ಧಾರಕ್ಕೆ ಮನಸ್ಸೇ ಮೂಲ ಕಾರಣ’ -ಇಂದೂಧರ ಗೌತಮ

ಚಿತ್ರದುರ್ಗ, ಮಾ.31: ಮದ್ಯ ವ್ಯಸನಿಯು ಕುಡಿದು ತನ್ನನ್ನು ಹಾಳು ಹಾಳು ಮಾಡಿಕೊಳ್ಳುವುದಕ್ಕೂ, ಕುಡಿತವನ್ನು ನಿಯಂತ್ರಣದಲ್ಲಿಟ್ಟುಕೊಂಡು ಮನುಷ್ಯ ಉದ್ಧಾರವಾಗುವುದಕ್ಕೂ ಮೂಲ ಮನಸ್ಸೇ ಕಾರಣ ಎಂದು ಭಗವಾನ್ ಬುದ್ಧರು ಹೇಳಿದ್ದಾರೆ ಎಂದು ಉಪನ್ಯಾಸಕ ಇಂದೂಧರ ಗೌತಮ ಹೇಳಿದರು.

ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ಕಂಡಂತಹ ಬುದ್ಧ ಕಾರ್ಯಕ್ರಮದಲ್ಲಿ ಬುದ್ಧ ಮತ್ತು ಆತನ ಧರ್ಮ ಕೃತಿಯನ್ನು ಓದಿ ಮಾಲಿನ್ಯಗಳಿಂದ ಮನಸ್ಸನ್ನು ಪರಿಶುದ್ಧಗೊಳಿಸುವ ಬಗೆಗಿನ ಬುದ್ಧರ ಅಭಿಪ್ರಾಯವನ್ನು ವಿಶ್ಲೇಷಿಸಿದರು.
‘ಎಲ್ಲದಕ್ಕೂ ಮೂಲ ಮನಸ್ಸು, ಮನಸ್ಸೇ ಯಜಮಾನ: ಮನಸೇ ಕಾರಣ’: ಮನಸ್ಸಿನ ಒಳಗೆ ಕೆಟ್ಟ ಭಾವನೆಗಳಿದ್ದರೆ ಆಗ ಮಾತುಗಳು ಕೆಟ್ಟದಾಗಿರುತ್ತವೆ, ಕೆಲಸಗಳು ಕೆಟ್ಟವಾಗಿರುತ್ತವೆ, ಗಾಡಿಯನ್ನು ಎಳೆಯುವವನ ಹಿಂದೆ ಚಕ್ರ ಹೋಗುವಂತೆ, ಆ ಪಾಪದಿಂದ ಉಂಟಾಗುವ ದುಃಖವು ಮನುಷ್ಯನನ್ನು ಹಿಂಬಾಲಿಸುತ್ತದೆ.
“ಇದೆಲ್ಲಕ್ಕೂ ಮನಸ್ಸೇ ಮೂಲ,ಮನಸ್ಸು ಆದೇಶಿಸುತ್ತದೆ, ಮನಸ್ಸು ಸಂಚು ಮಾಡುತ್ತದೆ .”
ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಆಗ ಮಾತುಗಳು, ಕೆಲಸಗಳು ಒಳ್ಳೆಯದಾಗಿರುತ್ತವೆ. ವಸ್ತುವನ್ನು ನೆರಳು ಅನುಸರಿಸುವಂತೆ, ಅಂತಹ ಮನುಷ್ಯನ ಸನ್ನಡತೆಯಿಂದ ಸಂತೋಷ ಲಭಿಸುತ್ತದೆ ಎಂದು ಬೋಧಿಸಿದ್ದಾರೆ ಎಂದರು.
ಬುದ್ಧ ಧ್ಯಾನ ಕಾರ್ಯಕ್ರಮವನ್ನು ಲಾಯರ್ ಬೆನಕನಹಳ್ಳಿ ಚಂದ್ರಪ್ಪ ಹಾಗೂ ನನ್ನಿವಾಳದ ರವಿಕುಮಾರ್ ಶಿವಲಿಂಗಪ್ಪ ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ನ ನಿವೃತ್ತ ಪ್ರಾಂಶುಪಾಲರಾದ ಮಂಜಣ್ಣನವರು ಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಕುರಿತಾದ ಜಾಗೃತಿ ಗೀತೆಯನ್ನು ಹಾಡಿದರು.
ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಜಿಲ್ಲಾ ಖಜಾಂಚಿಗಳಾದ ಭೀಮನಕೆರೆಯ ಪಿ ತಿಪ್ಪೇಸ್ವಾಮಿ ವ್ಯವಸ್ಥೆ ಮಾಡಿದರು
ಕಾರ್ಯಾಧ್ಯಕ್ಷರಾದ ನಿವೃತ್ತ ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಬಿಪಿ ಪ್ರೇಮನಾಥ್, ನಿವೃತ್ತ ಮುಖ್ಯೋಪಾಧ್ಯಾಯರಾದ ತಿಮ್ಮಣ್ಣ, ಬನ್ನಿ ಕೊಡು ರಮೇಶ್, ತಿಪ್ಪಮ್ಮ ಸಾಧಿಕ್ ನಗರದ ಗಿರಿಜಾ ಶಾಂತ ಮುಂತಾದವರು ಇದ್ದರು.
—–