ಅನುದಿನ ಕವನ-೧೧೯೦, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ:ಯಾರು ಕಳೆದ ಇರುಳು

ಯಾರು ಕಳೆದ ಇರುಳು

ಯಾರು ಕಳೆದ ಇರುಳು  ಬಂದು
ಕದವ ಬಡಿದರು?
ಯಾರು ಪಿಸುನುಡಿಯಲಿ ಹೆಸರ
ಹಿಡಿದು ಕರೆದರು?

ಕದವ ತೆರೆಯೆ ನುಗ್ಗಿ ಬಂದ
ಕಾಳ ಕತ್ತಲು
ಮೈಯನಾವರಿಸಿದ ಹಾಗೆ
ಗಾಳಿ ಸುತ್ತಲು.

ಮಿಂಚಿದಾಗ ಹೊಳೆದು ಅಳಿದ
ಏನೋ ಆಕೃತಿ
ಗಂಟಲಾರಿ,ಮೈಯು ಬೆವರಿ
ಎಲ್ಲ ವಿಸ್ಮೃತಿ.

ಒಳಗೂ ಹೊರಗೂ ಪದಗಳಿರದ
ಏನೋ ಕಂಪನ
ಅರ್ಥ ಸಿಗದ ಗೊಂದಲದಲಿ
ಉಳಿದ ಮೈಮನ.


-ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ
—–