ಎರೆಹುಳು
ಎಂದು ಹೇಳಿ
ಹೆಗಲೇರಿ
ನಡು ಬೆನ್ನಿಗಿಳಿದ ಮೇಲೆ
ತಾನು ಕೊಳಕು ಮಂಡಲ
ಎಂದು
ಉಸಿರ ಬಿಟ್ಟರೆ
ಹೇಳುವುದಕ್ಕೇನಿದೆ ?
ಅಜ್ಜ
ಮುತ್ತಜ್ಜಂದಿರ
ಕಾಲದಿಂದಲೂ
ಮನುಷ್ಯ
ಎರೆಹುಳು. ಕೊಳಕು ಮಂಡಲ,
ಕ್ರಿಮಿ- ಕೀಟ ರೋಗ-ರುಜಿನಿ
ಪೀಡೇ-ಭಾದೆಗಳೊಂದಿಗೆ
ಬದುಕಿದ್ದು…
ಒಪ್ಪತ್ತಿನ ಕೂಳಿಗಾಗಿ
ನಾಳೆಯ ಹಿಡಿ ಕಾಳಿಗಾಗಿ
ಎಲ್ಲಕ್ಕಿಂತ ಹೆಚ್ಚಾಗಿ
ಒಂದು ಘನತೆಯುತ ಬಾಳಿಗಾಗಿ
ಸವ೯ಶಕ್ತ ಭಗವಂತನೇ
ಕೂಳಿನಂತೆ
ಕಾಳಿನಂತೆ ಒಂದೊಳ್ಳೇ ಬಾಳನ್ನೂ
ಸವ೯ರಿಗೂ ದಯಪಾಲಿಸು.
-ಜಹಾಂಗೀರ್.ಎಂಎಸ್, ಬೆಂಗಳೂರು
—–
ಇವರು ಪಾಪ ಪಾಂಡು ಧಾರವಾಹಿಯಲ್ಲಿ ಮಾಡಿದ್ದಾರಲ್ವಾ