ಅನುದಿನ ಕವನ-೧೨೦೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್, ಕವನದ ಶೀರ್ಷಿಕೆ: ಮಳೆಯ ಸದ್ದು

ಮಳೆಯ ಸದ್ದು

ಇಡಿ ಆಗಸವೆಲ್ಲ ಉರಿವ
ಕೆಂಡದ ಬಿಸಿಲು
ಆಹಾ..! ಬಿಸಿಲೆ…!
ಏನು ನಿನ್ನ ಲೀಲೆ..!
ನಿನ್ನ ಝಳದ ಸಾಲೆ
ಬೆವರು ತಂದಿತಲ್ಲೆ..!

ಒಂದಿಷ್ಟು ಶಪಿಸಿದೆ ಮಳೆ
ಛೇ…ಮಳೆ ಬರಬಾರದಿತ್ತೆ..?
ಸಂಜೆಯಾಗಿತ್ತು..!
ಆಗಸದ ಮೋಡಗಳು ಚದುರಿ
ಮೋಡಗಳು ಕರಿಸೀರೆ ಹೊದ್ದಂತಿತ್ತು..!

ಮನೆಯ ವಿದ್ಯುತ್ ಹೋಯಿತು
ಮೋಬೈಲ್ ಚಾರ್ಜ ಕಿತ್ತಿ
ಹೊರಗಡೆ ನೋಡೋಣವೆಂದರೆ
ವರುಣನ ಆಗಮನ
ಗುಡುಗು ಸಿಡಿಲಿನೊಂದಿಗೆ,
ಬಂತು ಮಳೆ…!
ಆದರೂ ತೊಯ್ಯಲಿಲ್ಲ ಇಳೆ..!

ಈಗ ಮತ್ತೆ ಸೆಖೆಯಾಗುತ್ತಿದೆ
ಅರ್ಧ ಮಳೆ ಬಂದಿದ್ದಕ್ಕಿರಬಹುದು..
ಮಳೆಗೂ ಬಿಸಿಲಿಗೂ
ಸಮರ ನಡೆದಿರಬಹುದು..

-ಶಂಕರಾನಂದ ಹೆಬ್ಬಾಳ, ಇಳಕಲ್
—–