ಏ.24 ವರನಟ, ಪದ್ಮಭೂಷಣ, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ೯೫ನೇ ಹುಟ್ಟುಹಬ್ಬ! ಈ ಹಿನ್ನಲೆಯಲ್ಲಿ ಕವಯಿತ್ರಿ ಹೂವಿನ ಹಡಗಲಿಯ ಶೋಭ ಮಲ್ಕಿಒಡೆಯರ್ ಅವರು ಡಾ. ರಾಜಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳ ಹೆಸರುಗಳನ್ನೇ ಬಳಸಿ ‘ದೃವತಾರೆ’ ಕವನ ರಚಿಸುವ ಮೂಲಕ ಮೇರು ನಟರಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ.👇🎂🌺🍀🌹🍀💐
*ದೃವತಾರೆ*
ವಿಶ್ವದಲ್ಲೇ ‘ಬಂಗಾರದ ಹೂವು’ ಆಗಿ ಬಾಳಿದರು ‘ಬಹದ್ದೂರ್ ಗಂಡು’ ಈ ‘ಓಹಿಲೇಶ್ವರ’
‘ಚಂದ್ರಕುಮಾರ’ ರಾಗಿ ಬಂದ ಮುತ್ತಣ್ಣ ನಾಮದ ವರನಟ
ಸಿನಿರಂಗಕ್ಕೆ ಡಾ. ರಾಜ್ ಕುಮಾರ್ ಆಗಿ ಅಡಿಯಿಟ್ಟರು ಈ ‘ಕಠಾರಿ ವೀರ’
ಚಿತ್ರರಂಗಕ್ಕೇ ‘ಹೊಸ ಬೆಳಕು’ ತಂದ ‘ಕವಿರತ್ನ ಕಾಳಿದಾಸ’ ನೆಂಬ ಮೇರುನಟ //
ಅಭಿಮಾನಿಗಳನ್ನೇ ದೇವರೆಂದು ನುಡಿದು ನಡೆದರು ‘ಭಕ್ತ ಕುಂಬಾರ’
‘ಮನಸ್ಸಾಕ್ಷಿ’ ಜೊತೆಗೇ ಬಾಳಿದರು ‘ಬಂಗಾರದ ಮನುಷ್ಯ’
‘ಕಸ್ತೂರಿ ನಿವಾಸ’ ದ ಪಾತ್ರದಂತೆಯೇ ಜೀವನದುದ್ದಕ್ಕೂ ಬಾಳಿದರು ‘ಭಕ್ತ ಚೇತ’
ಎಲ್ಲರಿಗೂ ‘ಪರೋಪಕಾರಿ ಜಗ ಮೆಚ್ಚಿದ ಮಗ’ ಈ ‘ದೇವತಾ ಮನುಷ್ಯ’ //
‘ಯಾರಿವನು?’ ಗೊತ್ತಿಲ್ಲವೆ ‘ದೇವರ ಗೆದ್ದ ಮಾನವ’
‘ಗಂಧದ ಗುಡಿ’ ಯಲ್ಲಿ ‘ತೂಗುದೀಪ’ ಬೆಳಗಿದ ‘ಮಯೂರ’ ‘ಭಕ್ತ ಪ್ರಹ್ಲಾದ’ ದಲ್ಲಿ ಪುನೀತ್ ನೊಂದಿಗೆ ಅಭಿನಯಿಸಿದ ‘ವೀರ ಕೇಸರಿ’
‘ಸನಾದಿ ಅಪ್ಪಣ್ಣ’ ನಾಗಿ ಶಹನಾಯಿ ನುಡಿಸಿದ ‘ರಾಜಶೇಖರ’ //
‘ಮನ ಮೆಚ್ಚಿದ ಮಡದಿ’ ಯೊಂದಿಗೆ ಕಂಡರು ‘ಜೀವನ ಚೈತ್ರ’
‘ಒಂದು ಮುತ್ತಿನ ಕಥೆ’ ಹೇಳಿದಂತಹ ‘ಎಮ್ಮೆ ತಮ್ಮಣ್ಣ’
‘ಸಂಪತ್ತಿಗೆ ಸವಾಲು’ ಹಾಕಿದಾಗ ‘ಅದೇ ಕಣ್ಣು’ ಕಂಡಿದ್ದು ‘ಆಕಸ್ಮಿಕ’
‘ಕೆರಳಿದ ಸಿಂಹ’ ನಾಗಿ ‘ನೀ ನನ್ನ ಗೆಲ್ಲಲಾರೆ’ ಎಂದ ‘ಚೂರಿ ಚಿಕ್ಕಣ್ಣ’ //
‘ಕುಲವಧು, ಮಹಾಸತಿ ಅನಸೂಯಾ’ ಳೊಂದಿಗೆ ಹಾಡಿದ ರಾಗ ‘ಸಂಧ್ಯಾ ರಾಗ’
‘ಹಸಿರು ತೋರಣ’ ಕಟ್ಟಿ ಕೂಗಿದಾಗ ಕಂಡವಳೇ ‘ಆಶಾ ಸುಂದರಿ’
‘ಕನ್ಯಾರತ್ನ’ ‘ಗೌರಿ’ ಯನ್ನು ಕೈ ಹಿಡಿದ ‘ತಾಯಿಗೆ ತಕ್ಕ ಮಗ’
‘ಚಂದವಳ್ಳಿಯ ತೋಟ’ ದಲ್ಲಿ ‘ನಂದಾದೀಪ’ ಬೆಳಗಿದಳು ‘ಸ್ವರ್ಣಗೌರಿ’ //
-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ🖊️