ಅನುದಿನ ಕವಿ-೧೨೦೯, ಹಿರಿಯ ಕವಿ: ಎಚ್.ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಬೇಸಿಗೆ ಹೈಕುಗಳು

ಬೇಸಿಗೆ ಹೈಕುಗಳು

-೧-
ಬೇಸಿಗೆ ಕಾಲ
ನಿನ್ನೆದೆಯ ಫ್ರಿಜ್ಜಲ್ಲಿ
ತಣ್ಣಗಿರುವೆ

-೨-
ಬಳ್ಳಾರಿಯಲ್ಲೂ
ಸೆಖೆ ಆಗುವುದಿಲ್ಲ
ಸಖಿ ಇದ್ದರೆ

-೩-
ಕಾಯಿಸುವುದು
ಪ್ರೀತಿಯ ಮಳೆಯಲ್ಲಿ
ತೋಯಿಸಲಿಕ್ಕೆ

-೪-
ಸಹಿಸಲಾರೆ
ಅವಳ ಬೆಂಕಿ ಮಾತು
ಬೇಸಿಗೆ ವಾಸಿ

-೫-
ಅವಳು ಜೀವ
ನದಿ ಬೇಸಿಗೆಯಲ್ಲೂ
ಬತ್ತುವುದಿಲ್ಲ

-೬-
ಬೇಸಿಗೆಯಲ್ಲಿ
ಹುಚ್ಚು ಹಿಡಿಸುವ ಹೂ
ಎಪ್ರಿಲ್ ಫೂಲ್

-೭-
ಅವಸರಿಸ
ಲಿಲ್ಲ ಸೆಖೆ ಆಕೆಯೇ
ಕಳಚಿದಳು

-೮-
ಬೇಕು ಬೇಸಿಗೆ
ಮಣ್ಣ ಗಡಿಗೆ ಮತ್ತು
ಕಲ್ಲಂಗಡಿಗೆ

-೯-
ಬೇಸಿಗೆ ಬಗ್ಗೆ
ಬರೆಯಲಾರೆ ಶಾಯಿ
ಆವಿಯಾಗಿದೆ

-ಎಚ್.ಡುಂಡಿರಾಜ್, ಬೆಂಗಳೂರು
—–