ನಿನ್ನ ನೋವಿಗೆ ನೀನೆ ಔಷಧ
ನೋವಾದಾಗ
ಹಾಡಿಬಿಡು
ಇಲ್ಲಾ
ಬರೆದುಬಿಡು
ಹಾಡಾಗಿ
ಹರಿದು ಹೋಗಲಿ
ಎದೆಯೊಳಗಣ ಕಿಚ್ಚು
ಕವಿತೆಯಾಗಿ
ಮರೆಸಿಬಿಡಲಿ
ಮನದೊಳಗಣ ಹುಚ್ಚು
ಬೆಚ್ಚದಿರು,
ಬೆದರದಿರು
ನೆಚ್ಚಿ ನೆರಳೀವರು
ನಿನ್ನಿಚ್ಚೆಯಲಿ ಹಾಡಿದಾಗ
ಮೆಚ್ಚಿ
ಮೈದಡವುವರು
ಅಚ್ಚು ಮೆಚ್ಚಿನಲಿ..
ಕೊಚ್ಚಿ ಹೋಗದಿರು
ಮೋಸದ ಕೊಚ್ಚೆ
ಮನಗಳ
ನಡುವೆ…
ಎದೆತುಂಬಿ ಹಾಡುತ್ತಿರು,
ಮನದುಂಬಿ ಬರೆಯುತ್ತಿರು
ಲೋಕವೇ
ಮೆಚ್ಚುವ ಹಾಗೆ….!
-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ
—–