ಬಳ್ಳಾರಿ: ಇಂದಿರಾನಗರದ ಅಂಜನಾ(ಅಂಜು) ವಿಧಿವಶ

ಬಳ್ಳಾರಿ, ಏ.27: ಇಲ್ಲಿನ ಇಂದಿರಾ ‌ನಗರದ 8 ನೇ ಕ್ರಾಸ್ ನ ನಿವಾಸಿ ಎಸ್.ಎಸ್.ಕೆ ಸಮಾಜದ ಅಂಜನಾ(42) ಶುಕ್ರವಾರ ರಾತ್ರಿ ವಿಧಿವಶರಾದರು.

ಎಸ್.ಎಸ್.ಕೆ ಸಮಾಜದ ನಗರ ಮುಖಂಡ, ಪತಿ ಮೋತಿಲಾಲ್ ಸಾ ರಾಯಭಾಗಿ, ಪುತ್ರ ಪುತ್ರಿ ಚಿಕ್ಕಪ್ಪ ನಗರದ ಹಿರಿಯ ವೈದ್ಯ ಡಾ. ಎ.ಎಸ್ ದಾನಿ ಸೇರಿದಂತೆ ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ. ವರ್ಷಗಳಿಂದ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿದ್ದ ಅಂಜನಾ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.
ಅಂತಿಮ‌ ನಮನ: ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಪಾಲಿಕೆ ಮಾಜಿ ಕಾರ್ಪೊರೇಟರ್ ಶ್ರೀನಿವಾಸ ಪೋತ್ಕರ್, ಮುಖಂಡರಾದ ಹೆಚ್. ಹನುಮಂತಪ್ಪ,  ವೀರಶೇಖರ ರೆಡ್ಡಿ, ಅಂಚೆ ಕಚೇರಿಯ ನಿವೃತ್ತ ಅಧಿಕಾರಿ ಶ್ರೀನಿವಾಸ ದಾನಿ, ಹಿರಿಯ ವೈದ್ಯ ಡಾ.ಎ.ಎಸ್. ದಾನಿ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಎಸ್.ಎಸ್.ಕೆ ಸಮಾಜದ ಜಿಲ್ಲಾಧ್ಯಕ್ಷ ವಿಠಲಸಾ ಇರಕಲ್, ಮುಖಂಡರಾದ ಕೃಷ್ಣಮೂರ್ತಿ ಅಲಂಕಿತ್, ಶ್ರೀನಿವಾಸ ಚವಡಿಮನಿ, ಶಿವಾಜಿರಾವ್ ಸಿದ್ಲಿಂಗ್, ಡಾ. ಬಿ ಆರ್ ಅಂಬೇಡ್ಕರ್ ಸಂಘದ ಮುಖಂಡರಾದ ತಿಪ್ಪೇಸ್ವಾಮಿ, ಮೋಹನ ದಾಸ್, ಇಂದಿರಾನಗರದ ಮುಖಂಡರಾದ ಲಕ್ಷ್ಮಣ ದಾಸ್ ಸೇರಿದಂತೆ ಹಲವು ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ನಗರದ ಹರಿಶ್ಚಂದ್ರ ಘಾಟ್ ನಲ್ಲಿ‌ ಶನಿವಾರ ಮಧ್ಯಾಹ್ನ ಎಸ್.ಎಸ್.‌ಕೆ ಸಮಾಜದ ಧಾರ್ಮಿಕ ‌ವಿಧಿ ವಿಧಾನ ದಂತೆ ಅಂತಿಮ ಸಂಸ್ಕಾರ ‌ನೆರವೇರಿಸಲಾಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದರು.