ಕ್ಯಾಂಪ್ ಫೈರ್ ನ ಉರಿಕೆಂಡದ ಮುಂದೆ
ಹಲ್ಲು ಬಿಗಿ ಹಿಡಿದು ಕೈ ಮುಂಚಾಚಿ
ಚಳಿ ಕಾಯಿಸುತ್ತಾಳೆ ಆ ಚೆಲುವೆ
ಒಮ್ಮೆ ತನ್ನ ಗಲ್ಲಕ್ಕೂ
ಇನ್ನೊಮ್ಮೆ ಅವನ ಗಲ್ಲಕ್ಕೂ ಸಂತಸದಿ
ಬೆಚ್ಚನೆಯ ಬೆರಳು ಸವರುತ್ತಾ
ಕೈಕೈ ಹಿಡಿದು..
ಶಕ್ತಿ ಒಬ್ಬರಿಂದ ಒಬ್ಬರಿಗೆ
ವಿನಿಮಯವಾಗುವದೊಂದು ಸಚಿತ್ರ ಸತ್ಯ
ಒಂದು ನಗು,ಒಂದು ಸ್ಪರ್ಷ
ಒಂದು ನೋಟದ ವಿನಿಮಯದ ಹಿಂದೆ
ಎಲ್ಲ ಪದಗಳನೂ ಮೀರಿದ
ಏನೋ ಒಂದಿದೆ!
-ಶಿವರಾಜ್ ಬೆಟ್ಟದೂರು, ರಾಯಚೂರು