ನೀನಿಲ್ಲದೆ ನಾನೇ…
ನಿನ್ನ ಅರಿಯುವ ಅಸೆಯಿಂದ
ಗ್ರಂಥಗಳ ಹೊಕ್ಕಿದ್ದೆಷ್ಟೋ?
ಗುಡಿ ಗುಂಡಾರಗಳ ಮೆಟ್ಟಿಲೇರಿಳಿದಾಗ
ಎಡತಾಕಿದ ಹೃದಯಗಳೆಷ್ಟೋ?
ನಿನ್ನ ಸೇರುವ ಆಸೆಯಿಂದ
ಗಾಳಿ, ಬೆಳಕು, ನದಿ
-ಗಳೊಡಗೂಡಿ ಪಥಿಸಿದೆನೆಷ್ಟೋ?
ಕ್ರಮಿಸಿ ಹಿಂತಿರುಗಿದ ಪಥಗಳಲಿ
ನಡೆದ ದಾರಿಯೆಷ್ಟೋ?
ನಿನ್ನ ಕಲ್ಪಿಸುವ ಆಸೆಯಿಂದ
ತುಲನೆಗೈದ ಕಾಯಗಳೆಷ್ಟೋ?
ಹೂವು ಹಣ್ಣು ಕಾಯಿಗಳಾಗಿ
ಭೂಮಿಯೊಳು ಗೊಬ್ಬರವಾದದ್ದಷ್ಟೋ?
ಬೆವರ ಹನಿಯೊಳು,
ಎದೆಯ ಹಿಮದೊಳು
ಕಣ್ಣ ಪ್ರೀತಿಯೊಳು
ಎದೆಯ ಉಸಿರೊಳು,
ಭವದ ಜಗದ ದೀವಿಗೆಯೇ…
ನೀನಿಲ್ಲದೆ… ನಾನೇ?
-ಮಹಮ್ಮದ್ ರಫೀಕ್, ಕೊಟ್ಟೂರು
——