ಮುಖ-ಮುಖವಾಡ
ಪ್ರತಿಜ್ಞೆ ಮಾಡಿದೆ ಈಗ:
ನಾನೇ ಹಾಕಿಕೊಂಡ
ನನ್ನ ಮುಖಕ್ಕಂಟಿಕೊಂಡಿದ್ದ ಮುಖವಾಡಗಳ
ಕಿತ್ತೊಗೆದು ನಿಜದ ನೆಲೆಯಲ್ಲಿ ನಿಲ್ಲಲು .
ಒಂದೊಂದಾಗಿ ಕಿತ್ತು
ಬೆಂಕಿಗೆಸೆಯುತ್ತಾ
ಮುಖ ಯಾವುದು ಮುಖವಾಡ ಯಾವುದು
ಎಂಬುದೇ ತಿಳಿಯದೆ
ನನ್ನ ನಿಜ ಮುಖವನ್ನೇ
ಕಿತ್ತೆಸೆದದ್ದು
ಗೊತ್ತಾಗಲೇ ಇಲ್ಲ
ನನಗೀಗ ಮುಖವೇ ಇಲ್ಲ
ಈಗ ನನ್ನದೇ ಮುಖವೊಂದು
ನನಗೆ ಬೇಕಾಗಿದೆ
ಹೇಗೆ ಪಡೆಯಲಿ
ನೀವೇ ಹೇಳಿ…
-ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ