ಬೆಂಗಳೂರು, ಮೇ 15: ವಿಶ್ರಾಂತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 74ನೇ ಹುಟ್ಟುಹಬ್ಬವನ್ನು ನಗರದಲ್ಲಿ ಬುಧವಾರ ಡಾ.ಸುಭಾಷ್ ಭರಣಿ ಅವರ ಅಭಿಮಾನಿಗಳು, ಹಿತೈಷಿಗಳು, ಬಂಧುಮಿತ್ರರು ಸಂಭ್ರಮ ಸಡಗರಗಳಿಂದ ಆಚರಿಸಿದರು.
ವಿಶೇಷವೆಂದರೆ ಡಾ.ಭರಣಿ ಅವರ ಸದಾಶಿವ ನಗರದ ನಿವಾಸ ಬಳಿ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿ ಗಮನ ಸೆಳೆದರು.
ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಾ. ಸುಭಾಷ್ ಭರಣಿ ಅಭಿಮಾನಿಗಳ ಸಂಘದ 50 ಕ್ಕೂ ಹೆಚ್ಚು ಪದಾಧಿಕಾರಿಗಳು, ಸದಸ್ಯರು ರಕ್ತದಾನ ಮಾಡುವ ಮೂಲಕ ತಮ್ಮ ಮೆಚ್ಚಿನ ಡಾ. ಭರಣಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮತ್ತೊಂದು ವಿಶೇಷವೆಂದರೆ ಡಾ. ಭರಣಿ ಮತ್ತು ಶ್ರೀಮತಿ ಮೋಹನಾ ಭರಣಿ ದಂಪತಿ ತಮ್ಮ 45ನೇ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬದ ಸದಸ್ಯರು, ಬಂಧು ಮಿತ್ರರೊಂದಿಗೆ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚಿನ್ನಯ್ಯ, ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್, ಅಭಿಮಾನಿ ಸಂಘದ ಯಶವಂತಪುರ ಗುರು, ಬನಶಂಕರಿ ಅರುಣ್, ಹೆಬ್ಬಾಳದ ವೆಂಕಟೇಶ್, ಡಾ. ಭರಣಿ ಅವರ ಪುತ್ರಿಯರಾದ ಸೌಜನ್ಯ ಭರಣಿ, ಸೌಮ್ಯ ಭರಣಿ, ಪುತ್ರ ಸಮರ್ಥ ಭರಣಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
——