ಬೆಂಗಳೂರು, ಮೇ 16: ಸಿರಿಗನ್ನಡ ವೇದಿಕೆ ರಾಜ್ಯ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಿರಿಗನ್ನಡ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾಗಿ ಕೊಪ್ಪಳದ ಜಿ.ಎಸ್.ಗೋನಾಳ್, ಕಾರ್ಯಾಧ್ಯಕ್ಷರಾಗಿ ಬೀದರಿನ ಡಾ..ಎಂ.ಜಿ.ದೇಶಪಾಂಡೆ, ಗೌರವಾಧ್ಯಕ್ಷರಾಗಿ ಬೆಂಗಳೂರಿನ ಡಾ.ಎಂ.ಆರ್.ನಾಗರಾಜರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಉಪಾಧ್ಯಕ್ಷರಾಗಿ ಮೈಸೂರಿನ ಡಾ.ಸೌಗಂಧಿಕಾ.ವಿ.ಜೋಯಿಸ್, ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷರಾಗಿ ಬೆಳಗಾವಿಯ ಶ್ರೀಮತಿ ರಜಿನಿ ಆಶೋಕ್ ಜೀರಗ್ಯಾಳ, ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ಉಮೇಶ್.ಸಿ.ಎನ್, ಖಜಾಂಚಿಯಾಗಿ ಅನ್ನದಾನೇಶ್ ಮಾದಿನೂರು, ಕಾನೂನು ಸಲಹೆಗಾರರಾಗಿ ವಕೀಲರಾದ ಹೆಚ್.ಗುರುಬಸಪ್ಪ ಅವರುಗಳನ್ನು ಅಯ್ಕೆ ಮಾಡಲಾಗಿದ್ದು ನೂತನ ಕಾರ್ಯಕಾರಿ ಸಮಿತಿ ನೋಂದಣಿಯಾಗಿ ಅಸ್ಥಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಶೀಘ್ರದಲ್ಲಿ ಆಯೋಜಿಸುವುದಾಗಿ ನೂತನ ರಾಜ್ಯಾಧ್ಯಕ್ಷ ಜಿ.ಎಸ್.ಗೋನಾಳ್ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದ್ದಾರೆ. ಸಿರಿಗನ್ನಡ ವೇದಿಕೆ ಜಿಲ್ಲಾವಾರು,ತಾಲ್ಲೂಕು,ಹೋಬಳಿ ಘಟಕಗಳನ್ನು ಶಾಖೆಗಳನ್ನು ಬಲಪಡಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ನೋಂದಣಿ ಕಾರ್ಯ ಪ್ರಕ್ರಿಯೆಯಲ್ಲಿ ಸಿರಿಗನ್ನಡ ಬಳಗದ ಶ್ರೀಮತಿ ಮಾಲತಿ.ಎಸ್.ಆರಾಧ್ಯ, ಕೆ.ವೇಣುಗೋಪಾಲ್ ಅವರು ಪಾಲ್ಗೊಂಡಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಿ ಎಸ್ ಗೋನಾಳ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.