ಅನುದಿನ ಕವನ-೧೨೩೨, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ನಿನ್ನನಿಷ್ಟು
ಹುಡುಕುವಾಗ
ನಾನೇಷ್ಟು
ಕಳೆದು ಹೋಗುತ್ತಿರುವುದು

ಹೂಗಳಿಷ್ಟು
ಅರಳಿ ಉದುರಿ
ನೆಲದೊಲವಲ್ಲಿ
ಮಿಲನಗೊಳ್ಳುತ್ತಿದ್ದರೂ
ನಿನಗೊಂದಿಷ್ಟು
ನೆನಪಿನ ಪರಿಮಳ ಬೀಸದಿರುವುದು

ಪದಗಳಿಷ್ಟು
ಹರಡಿಕೊಂಡು
ನಿನಗಷ್ಟೇ
ಕವಿತೆಗಳು ರೂಪುಗೊಳ್ಳುತ್ತಿದ್ದರೂ
ನೀ ಓದದೆ ಇರುವುದು

ಇಷ್ಟೊಂದು
ಅಲೆಗಳು
ದಡವ ತಲುಪುತ್ತಿದ್ದರೂ
ನಿನ್ನದೊಂದು
ಬೆರಳಿಗೂ ತಾಕದಿರುವುದು

ಹಗಲು ರಾತ್ರಿಯೆನ್ನದೆ
ಸಮಯವೂ
ಸವೆಯುತ್ತಿದ್ದರೂ
ನೀ ಎನಗೆ ನಾ ನಿನಗೆ
ಸಿಗದಿರುವುದು

ನಿಜಕ್ಕೂ ನನ್ನೊಂದಿಗಿನ
ಹೋರಾಟವೇ ಸರಿ


-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–