ಮನಂ-ಪದ ಸಂಪತ್ತು
ಮಾಳ – ಹೊಲ, ಗದ್ದೆ, ಮೈದಾನ, ತೆರೆದ ಪ್ರದೇಶ
ಸಂತೆ ಮಾಳ – ಸಂತೆ ನಡೆಯುವ ನೆಲ
ಗದ್ದೆ ಮಾಳ, ರಾಗಿ ಮಾಳ, ಭತ್ತದಮಾಳ, ಮೆಣಸಿನ ಮಾಳ ಇತ್ಯಾದಿಯಾಗಿ ಮಾಳ ಗಳಿವೆ
ಮಳವಳ್ಳಿಯಲ್ಲಿ ಇ ಎಲ್ಲಾ ಪದಗಳಿವೆ
ಹೆಣಿನ ಮಾಳ – ಸ್ಮಶಾನ
ದೊರೆ ಮಾಳ – ದೊರೆಯವರ ಜಮೀನು
ಎಡೆಮಾಳ – ದೇವರ ಎಡೆಗಾಗಿ ಬೆಳಸುಮಾಡಲು ಇರುವ ಜಮೀನು
ಮಾಳವ – ಮಾಳದ ಒಡೆಯ – ದೊರೆ
ಪ್ರಾಚೀನ ರಾಜ ಮನೆತನಗಳಲ್ಲಿ ಮಾಳವರು ಮೊದಲ ಸಾಲಿನವರು
ಅವರ ನಾಣ್ಯಗಳೆ ಭಾರತದಲ್ಲಿ ದೊರಕಿದ ಅತ್ಯಂತ ಪ್ರಾಚೀನ ನಾಣ್ಯಗಳು
ಹರಪ್ಪ ಮೊಹೆಂಜೊದಾರ್ ಕುರುಹುಗಳು ಇರುವುದು ಮಾಳವ ಪ್ರಾಂತದಲ್ಲಿ , ಇದು ಪಂಜಾಬಿನಲ್ಲಿದೆ.
ಚಾಲುಕ್ಯರು ಮಾಳವರ ಹೆಣ್ಣುಗಳ ಮದುವೆ ಆಗುತ್ತಿದ್ದರು.
ಹೊಯ್ಸಳ ದೊರೆ ವಿಷ್ಣುವರ್ಧನನ ಅಥವಾ ಬಿಟ್ಟಿದೇವನ ಬಿರುದು “ಮಾಳಪರ ಗಂಡ” ಅಂದರೆ ಮಾಳವ ಜನರ ಒಡೆಯ
ಮಾಳ – ಹೊಲ – ಜಮೀನು – ನೆಲ – ಮೈದಾನ
ಮಾಳವ – ಹೊಲಯ – ಕರುನಾಡಿನ ಮೊದಲ ದೊರೆಗಳು – ಕಾಡು ಕಡಿದು ಹೊಲ ಮಾಡಿದವರು.
ಮಾಳವ ದೊರೆ ಮನೆತನಗಳು ಭಾರತಾದ್ಯಂತ ಇತಿಹಾಸದಲ್ಲಿ ಕಂಡು ಬರುತ್ತವೆ.
ರಾಷ್ಟ್ರಕೂಟರ ರಾಜಧಾನಿ ಮಾಳ ಖೇಡ ಆಗಿತ್ತು.
ಮಾಳಖೇಡ – ಹೊಲ ಹೊಲ
ಖೇಡ ಅಂದರೂ ನೆಲ ಹೊಲ
ರಾಷ್ಟ್ರಕೂಟರ ರಾಜಲಾಂಛನ ಕಳಸ ಮತ್ತು ನೇಗಿಲು.
ಬಹಳ ಇದೆ ಇಲ್ಲಿಗೆ ಇಷ್ಟು ಸಾಕು.
– ಮನಂ, ಬೆಂಗಳೂರು
ಪದಗಳ ಅರ್ಥ ಅರ್ಥೈಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಸರ್ 💐 🙏