ಅನುದಿನ ಕವನ-೧೨೪೨, ಹಿರಿಯ ಕವಿ: ವೈ.ಎಂ.ಯಾಕೊಳ್ಳಿ, ಸವದತ್ತಿ

ದೇಹದ ನೋವು
ಕಳೆಯಬಹುದು ಆ
ಮನದ ನೋವು?

ಜೀವನದುದ್ದ
ಕೆಲವು ನೆನಪವು
ಮಾಯದ ಗಾಯ

ಜಗಕೆ ಸ್ವಂತ
ಕಾರಣ ಇವೆ ಮೆಚ್ಚೆ
ತಿರಸ್ಕರಿಸೆ

ಯಾರ‌ ಮೆಚ್ಚಿಕೆ
ಹೊಗಳಿಕೆಗಲ್ಲ ಈ
ಬಾಳು ನಮ್ಮದು

ಊರ ಮುಂದಿನ
ಗಳೆ ನೋಡಿ ಮಾತವು
ನಿಲ್ಲವು ಎಂದೂ

ಬೀಸುವ ಗಾಳಿ
ಬೀಳುವ ಮಳೆಗಿಲ್ಲ
ಯಾರ ಅಂಕುಶ

ಅವಳೂ ಒಮ್ಮೆ.
ಈ ಬೇಸಿಗೆಯ ಬೇಗೆ
ಧಗ್ಗನೇ ಉರಿ

ದೂರ ದಾರೀದು
ಹೃದಯ ಗೇಣು ಮಾತ್ರ
ಸದಾ ಹತ್ತಿರ

ಜನರ ಬಾಯಿ
ಸದಾ ತೆರೆದೆ ಇರೊ
ಕೊಳವೆ ಬಾವಿ

ಬೀಳದೆ ಉಳಿ
ಸರಿ ದಾರಿಯಲಿದ್ದು
ಬಿದ್ದರೆ ಕಷ್ಟ

-ವೈ.ಎಂ.ಯಾಕೊಳ್ಳಿ, ಸವದತ್ತಿ